ರಾಣೇಬೆನ್ನೂರು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ
ರಾಣೇಬೆನ್ನೂರು, ನ. 12- ಕನ್ನಡ ನಾಡು, ನುಡಿ, ಜಲ, ನೆಲ ಹಾಗೂ ಸಂಸ್ಕೃತಿ ಉಳಿವಿಗೆ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅವರ ಜೊತೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳು ಶ್ರಮಿಸುತ್ತಿವೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶಿಗ್ಲಿ ಹೇಳಿದರು. ಕಸಾಪ ಭವನದಲ್ಲಿ ನಡೆದ ಗುಡ್ಡಪ್ಪ ಹಾವನೂರ, ಚನ್ನಮ್ಮ, ಲಕ್ಷ್ಮಣ ಮಾಳಿಗಿಮನಿ ಹಾಗೂ ಗಂಗಮ್ಮ ಹಾವನೂರ ಅವರ ದತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಾಡು, ನುಡಿ ಹಾಗೂ ವ್ಯಕ್ತಿಗಳ, ಸಂಘ-ಸಂಸ್ಥೆಗಳ ಹೆಸರಿನಲ್ಲಿ, ಅವರು ಹೇಳಿದ ವಿಷಯದ ಅನುಸಾರ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮ ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ಶಿಗ್ಲಿ ಅವರು ವಿವರಿಸಿದರು.
ಮಹಿಳೆಯು ಇಂದು, ತಂದೆ-ತಾಯಿ, ಅಣ್ಣ, ತಮ್ಮ, ಪತಿ, ಮಕ್ಕಳ ಸಹಾಯ, ಸಹಕಾರದೊಂದಿಗೆ ಸಾಹಿತ್ಯ ಹಾಗೂ ಇನ್ನಿತರೆ ವಲಯಗಳಲ್ಲಿ ಗುರುತಿಸಲ್ಪಡುವಂತೆ ಬೆಳೆಯುತ್ತಿದ್ದು, ಅವರಿಂದ ಸಮಾಜಕ್ಕೆ ಉತ್ತಮ ಕೊಡುಗೆ ಸಿಗುತ್ತಿದೆ ಎಂದು ಅತಿಥಿಗಳಾಗಿದ್ದ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷೆ ಜ್ಯೋತಿ ಜಂಬಗಿ ಹೇಳಿದರು.
ನಿವೃತ್ತ ಉಪ ತಹಶೀಲ್ದಾರ ಶಿವಲಿಂಗಪ್ಪ ಸಂದಿಮನಿ, ಮೀನಾಕ್ಷಿ ಸಂದಿಮನಿ, ಈಶ್ವರ ಹಾವ ನೂರ, ನಗರಸಭೆ ಸದಸ್ಯೆ ಗಂಗಮ್ಮ ಹಾವನೂರ, ಮುಖ್ಯೋಪಾಧ್ಯಾಯ ಮಂಜುನಾಥ, ಮಾಳಗಿ ಮನೆ ಕುಟುಂಬದ ಸದಸ್ಯರು ಮತ್ತಿತರರಿದ್ದರು.