ಹರಿಹರ ಪ್ರಮುಖ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ : ಐಜಿಪಿ ರಮೇಶ್

ಹರಿಹರ ಪ್ರಮುಖ ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ : ಐಜಿಪಿ ರಮೇಶ್

ಹರಿಹರ, ನ.12-  ನಗರದ ಪ್ರಮುಖ ವೃತ್ತಗಳಲ್ಲಿ ಸುಗಮ  ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ, ಸಿಗ್ನಲ್ ಲೈಟ್, ಸಿ.ಸಿ‌ ಕ್ಯಾಮರಾ ಅಳವಡಿಕೆ  ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸುವುದಾಗಿ  ಡಿಐಜಿ ಹಾಗೂ ಪ್ರಭಾರ ಐಜಿಪಿಯೂ ಆಗಿರುವ  ಬಿ. ರಮೇಶ್ ಹೇಳಿದರು.

ಇಲ್ಲಿನ ವೃತ್ತ ನಿರೀಕ್ಷಕರ ಕಚೇರಿಗೆ ಅವರು ಆಗಮಿಸಿದ  ಸಂದರ್ಭದಲ್ಲಿ ಪೊಲೀಸ್ ಗೌರವ ಸ್ವೀಕರಿಸಿ, ನಂತರ ಪತ್ರಕರ್ತರೊಂದಿಗೆ  ಮಾತನಾಡಿದರು.   

ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾದಷ್ಟು ಸಂಚಾರ ಸಮಸ್ಯೆಗಳು ಸರ್ವೇ ಸಾಮಾನ್ಯ.   ಸಂಚಾರ ನಿಯಂತ್ರಣದ ಜೊತೆಗೆ ನೊಂದವರಿಗೆ ನ್ಯಾಯವನ್ನು ಒದಗಿಸುವುದಕ್ಕಾಗಿ ಪೊಲೀಸ್ ಅಧಿಕಾರಿಗಳ ತಂಡವು  ಬಹಳಷ್ಟು ಮುತುವರ್ಜಿಯಿಂದ ಕೆಲಸವನ್ನು ಮಾಡಲು ಮುಂದಾಗಿರುತ್ತದೆ.   ಇಲ್ಲಿನ ಅನೇಕ ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಲು  ಅಧಿಕಾರಿ ಗಳೊಂದಿಗೆ ಮಾತನಾಡುವುದಾಗಿ ಹೇಳಿದರು.

ಠಾಣೆಗೆ ಬಂದವರಿಗೆ ನ್ಯಾಯವನ್ನು ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ ವಾಗಿದೆ.  ಅದು ಬಿಟ್ಟು ರಾಜಿ ಸಂಧಾನ ಮಾಡುವುದಕ್ಕಲ್ಲ ಎಂದು ಅವರು  ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ನಗರದಲ್ಲಿನ ಹಲವಾರು ಸಮಸ್ಯೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧತೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಲಾಗಿದೆ ಮತ್ತು ಸಿಗ್ನಲ್ ಲೈಟ್ ಮತ್ತು ಸಿ.ಸಿ. ಕ್ಯಾಮರಾ ಅಳವಡಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದು, ಅವರು ಶೀಘ್ರದಲ್ಲೇ ಮಾಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದರು.

ಹರಪನಹಳ್ಳಿ, ಶಿವಮೊಗ್ಗ ರಸ್ತೆಯಲ್ಲಿರುವ ಶಾಲಾ-ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು.  ಶಾಲಾ ಸಮಯದಲ್ಲಿ ಬೃಹತ್ ಗಾತ್ರದ ವಾಹನ ಓಡಾಟ   ನಿಷೇಧ ಮಾಡಲಾಗಿದೆ  ಎಂದು ಎಸ್ಪಿ ಹೇಳಿದರು. 

ಈ ಸಂದರ್ಭದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್, ಸಿಪಿಐ ಸುರೇಶ್ ಸರಗಿ, ಪಿಎಸ್ಐಗಳಾದ ಮಂಜುನಾಥ್ ಕುಪೇಲೂರು, ಪ್ರಭು ಕೆಳಗಿನ ಮನೆ, ಶ್ರೀಪತಿ ಗಿನ್ನಿ, ವಿಜಯಕುಮಾರ್, ಚಿದಾನಂದ, ಮಹಾದೇವಪ್ಪ, ಎ.ಎಸ್.ಐ. ಮನಸೂರು ಆಹ್ಮದ್, ಸಿಬ್ಬಂದಿಗಳಾದ ಲಿಂಗರಾಜ್, ಸತೀಶ್, ಶಾಂತಕುಮಾರ್, ಪ್ರವೀಣ್, ಪ್ರಸನ್ನಕಾಂತ್, ರಮೇಶ್, ಹನುಮಂತ,  ಗಂಗಾಧರ್, ಗೋಪನಾಳ ಹನುಮಂತ್, ಬಸವರಾಜ್, ಕಾಳಮ್ಮ ಇತರರು ಹಾಜರಿದ್ದರು.

error: Content is protected !!