ದಾವಣಗೆರೆ, ನ. 11 – ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ (ಮೈಸೂರು ಕಪ್ 2024) ಸ್ಪರ್ಧೆಯ 10-11 ವರ್ಷದ ಸಬ್ ಜ್ಯೂನಿಯರ್ ವಿಭಾಗದಲ್ಲಿ ನಗರದ ನಿಧಿ ಬೇತೂರ್ ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ತಲಾ 1 ಚಿನ್ನದ ಪದಕ ಪಡೆದಿದ್ದಾಳೆ. ಕೆ.ಪಿ. ಜೋಸ್ ಅವರಿಂದ ತರಬೇತಿ ಪಡೆದಿರುವ ನಗರದ ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ನಿಧಿ ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿ ಪುತ್ರಿ.
January 22, 2025