ದಾವಣಗೆರೆ, ನ.11- ನಗರದ ಜಿಲ್ಲಾ ಸಶ್ರಸ್ತ್ರ ಮೀಸಲು ಪಡೆ ಆವರಣದಲ್ಲಿ ನಾಗರಿಕ ಬಂದೂಕು ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.
ಸ್ವಾಗತ ಭಾಷಣ ಹಾಗೂ ಪ್ರಾಸ್ತಾವಿಕ ನುಡಿಯನ್ನು ಡಿ.ಎ.ಆರ್. ಪೊಲೀಸ್ ಉಪಾಧೀಕ್ಷಕ ಪಿ.ಬಿ. ಪ್ರಕಾಶ್ ನಡೆಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು.
ಅತಿಥಿಗಳಾಗಿ ನಗರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ, ಡಿ.ಎ.ಆರ್. ಪೊಲೀಸ್ ನಿರೀಕ್ಷಕ ಹೆಚ್.ಬಿ. ಸೋಮಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿ.ಎ.ಆರ್. ಸಿಬ್ಬಂದಿಗಳಾದ ಕೆ. ಪಿ. ಶರತ್, ಬಿ. ಎಸ್.ಪುಟ್ಟಪ್ಪ, ಟಿ. ಬಸವರಾಜ್, ಹೆಚ್. ವೇದಮೂರ್ತಿ, ಹನುಮಂತಪ್ಪ, ವೀರನಗೌಡ್ರು, ಆರ್.ಎಸ್.ಐ. ಮಹೇಶ್ ಪಾಟೀಲ್. ಶಿಬಿರಾರ್ಥಿಗಳಾದ ಎಂ. ಜಿ. ಶ್ರೀಕಾಂತ್, ಸಿ.ಕೆ. ರಂಗಪ್ಪ, ಚೇತನಾ ಶಿವಕುಮಾರ್, ಕೆ.ಎನ್. ಮಂಜುನಾಥ್ ಭಾಗವಹಿಸಿದ್ದರು.