ದಾವಣಗೆರೆ, ನ.11- ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ಬೆಂಗಳೂರು ಇವರಿಂದ ಪೊಲೀಸ್ ಚಿನ್ನರ ಅಂಗಳ ಶಾಲೆಗೆ ಮಕ್ಕಳ ಆಟಿಕೆಗಳು ಹಾಗೂ ವಿದ್ಯಾಭ್ಯಾಸದ ಆಟಿಕೆಗಳನ್ನು ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ನ ಸರ್ಕಾರ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ರಾಷ್ಟ್ರಮಟ್ಟದ ಮುಖ್ಯಸ್ಥ ಜಗದೀಶ್ ಬೇಗೂರು, ಸಿಎಜಿಎಲ್ನ ಅಧಿಕಾರಿಗಳಾದ ಬೆಳಗಾವಿ ಜೋನಲ್ ಮ್ಯಾನೇಜರ್ ಎಸ್.ಎನ್. ರವಿ, ಸಚಿನ್ ಕುಮಾರ್, ಎಂ. ಆರ್. ವಿನಯ ಕುಮಾರ್ ಹಾಗೂ ಲೈಸನ್ ಅಧಿಕಾರಿ ಪ್ರಹ್ಲಾದ್
(ನಿವೃತ್ತ ಡಿಎಸ್ಪಿ) ಮತ್ತು ಪೊಲೀಸ್
ಇಲಾಖೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗಳಾದ ವಿಜಯ ಕುಮಾರ್ ಸಂತೋಷ್, ಮಂಜುನಾಥ, ಡಿಎಆರ್ ಡಿಎಸ್ಪಿ ಪ್ರಕಾಶ್, ನಗರ ಡಿಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ಸೋಮಶೇಖರಪ್ಪ ಆರ್ಪಿಐ ಡಿಎಆರ್ ಹಾಜರಿದ್ದರು.
ಪೊಲೀಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಿಎಆರ್ ಡಿಎಸ್ಪಿ ಪ್ರಕಾಶ್, ಮುಖ್ಯ ಪೇದೆ ಅಮರೇಶ್ ನಿರೂಪಿಸಿದರು. ಮಲ್ಲೇಶ್ ದೊಡ್ಡಮನಿ ವಂದಿಸಿದರು.