ಕಲಿಕೆ, ರೋಗಿಗಳ ಸೇವೆಗೆ ಹೆಚ್ಚು ಮಹತ್ವ ಕೊಡಿ

ಕಲಿಕೆ, ರೋಗಿಗಳ ಸೇವೆಗೆ ಹೆಚ್ಚು ಮಹತ್ವ ಕೊಡಿ

ಜೆ.ಜೆ.ಎಂ. ಮೆಡಿಕಲ್‌ ಕಾಲೇಜಿನ ವೈಟ್‌ ಕೋಟ್‌ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಆಲೂರು

ದಾವಣಗೆರೆ, ನ.11- ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ  2024-25ನೇ ಸಾಲಿನ ಪ್ರಥಮ ವರ್ಷದ ಎಂ.ಬಿ.ಬಿ.ಎಸ್‌. ಬ್ಯಾಚ್‌ನ ಓರಿಯಂಟೇಷನ್‌ ಮತ್ತು ವೈಟ್‌ ಕೋಟ್‌ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಮಂಜುನಾಥ್‌ ಆಲೂರು, ವೈದ್ಯಕೀಯ ವಿಷಯಗಳನ್ನು ಕಲಿಯುವುದರ ಮೇಲೆ ಹೆಚ್ಚು ಆಸಕ್ತಿ ಇಟ್ಟುಕೊಳ್ಳುವಂತೆ ವಿದ್ಯಾರ್ಥಿಗಳು ಸಲಹೆ ನೀಡಿದರು.

ಯಾವುದೇ ದುಶ್ಚಟಕ್ಕೆ ಬಲಿಯಾಗದೇ ರೋಗಿಗಳ ಸೇವೆಯ ಬಗ್ಗೆ ಹೆಚ್ಚು ಮಹತ್ವ ವಹಿಸಬೇಕು ಎಂದರು.

ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಶುಕ್ಲಾ ಶೆಟ್ಟಿ,  ಸಾಕಷ್ಟು ಕಡೆ ಕೇವಲ ಪಠ್ಯದ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಕೆಲವು ಕಡೆ ಕೇವಲ ಪ್ರಾಯೋಗಿಕವಾಗಿ ಒತ್ತನ್ನು ಕೊಡುತ್ತಾರೆ. ಆದರೆ ನಮ್ಮಲ್ಲಿ ಎರಡೂ ಆಸ್ಪತ್ರೆಗೆ  ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಹಾಗೂ ಉತ್ತಮ ಉಪನ್ಯಾಸಕರು ಇರುವುದರಿಂದ ನಿಮಗೆ ಪಠ್ಯ ಹಾಗೂ ಪ್ರಾಯೋಗಿಕ ಎರಡರಲ್ಲೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. 

ಎಸ್.ಎಸ್. ಹೈಟೆಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಅರುಣ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!