ದಾವಣಗೆರೆ, ನ.11- ನಗರದ ಪಿ.ಜೆ. ಬಡಾವಣೆ ಪಿಸಾಳೆ ಕಾಂಪೌಂಡ್ 3ನೇ ಕ್ರಾಸ್ನಲ್ಲಿ ಡ್ರೈನೇಜ್ ದುರಸ್ತಿಗಾಗಿ ಆಗ್ರಹಿಸಿ ಸ್ಥಳೀಯ ನಾಗರಿಕರು ಸ್ಥಳದಲ್ಲಿ ಪ್ರತಿಭಟನೆ ಮಾಡಿದರು.
ಪ್ರತಿಭಟನಾನಿರತ ಪಿಸಾಳೆ ನಾಗರಾಜರಾವ್ ಮಾತನಾಡಿ, ಸ್ಮಾರ್ಟ್ ಸಿಟಿಯಿಂದ ಹೊಸದಾಗಿ ಡ್ರೈನೇಜ್ ನಿರ್ಮಿಸಿದಾಗಿನಿಂದಲೂ ಪ್ರತಿ 15 ದಿನಕ್ಕೊಮ್ಮೆ ಡ್ರೈನೇಜ್ ನೀರು ಉಕ್ಕಿ ಹರಿಯುವುದರಿಂದ ಕಾಂಪೌಂಡ್ ಬಳಿ ನಾಗರಿಕರು ಮೂಗು ಮುಚ್ಚಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ.
ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ವಾರ್ಡಿನ ಸದಸ್ಯ ಅಜಯ್ ಕುಮಾರ್ ಇತ್ತ ಗಮನಹರಿಸುವುದನ್ನೇ ಮರೆತಿದ್ದಾರೆ.
ಪ್ರತಿ ಸಾರಿ ಮನವಿ ಮಾಡಿ ಸಾಕಾಗಿದೆ ಹಾಗೂ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯರಾದ ಅಜಯ್ ಕುಮಾರ್ ಅವರಿಗೆ ಸ್ಥಳೀಯ ಸಮಸ್ಯೆಗಳಿಗಾಗಿ ಫೋನ್ ಮಾಡಿದರೆ, ಫೋನ್ಗೆ ಉತ್ತರಿಸುವುದಿಲ್ಲ ಎಂದು ದೂರಿದರು.
ಮಧು ಪವಾರ್, ಪದ್ಮಜಾದವ್ ಗಾಯತ್ರಿ ಭಾಯಿ, ಬೇಬಿ ರಾಗಿಣಿ, ಭಾಗ್ಯ, ಸೌಮ್ಯ, ಕವಿತಾ, ಆಶಾ, ಸುರೇಶ್, ರುದ್ರೇಶ್ ಇನ್ನು ಅನೇಕ ಪಿಸಾಳೆ ಕಾಂಪೌಂಡಿನ ನಿವಾಸಿಗಳು ಇದ್ದರು.