ಡಾ.ಎಸ್.ಆರ್. ಲಕ್ಷ್ಮೀಕಾಂತ್
ದಾವಣಗೆರೆ, ನ.8- ಗುರುಗಳ ಮಾರ್ಗ ದರ್ಶನವನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕಾಪರ್‌ಎಜ್ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಎಸ್.ಆರ್. ಲಕ್ಷ್ಮೀಕಾಂತ್ ಹೇಳಿದರು.
ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಎಕ್ಸೋಟಿಕ್-24 ಪೋರಂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಉತ್ತಮವಾದ ಗುರಿ ಹೊಂದಬೇಕು ಎಂದ ಅವರು, ಫೋರಂ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ.ಎಸ್. ನೀಲಾಂಬಿಕೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಫೋರಂ ಒಳ್ಳೆಯ ವೇದಿಕೆಯಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಜೀವನದುದ್ದಕ್ಕೂ ಕಲಿಕಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಜತೆಗೆ ವೃತ್ತಿ ಜೀವನ ದಲ್ಲಿ ಬರುವ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಬೇಕು, ಆಗ ಮಾತ್ರ ವೃತ್ತಿ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಕಾರ್ಯ ಕ್ರಮದಲ್ಲಿ ಫೋರಂನ ಸಂಯೋಜಕಿ ಎಂ.ವಿ. ಪೂಜಾ, ಖಜಾಂಚಿ ಕೆ.ಬಿ. ಶ್ರಾವಣಿ, ಉಪಾಧ್ಯಕ್ಷ ಶ್ರೇಯಾಂಕ್ ಜವಾಯಿ, ಕಾರ್ಯದರ್ಶಿ ಬಿ.ಆರ್. ರಾಜೇಶ್ ಹಾಗೂ ಇತರರಿದ್ದರು.