ವಿಕಲಚೇತನರ ಆರೈಕೆ ಮಾನಸಿಕ ಏಕಾಗ್ರತೆಗೆ ಯೋಗ, ಧ್ಯಾನದಲ್ಲಿ ಭಾಗಿಯಾಗಬೇಕು

ವಿಕಲಚೇತನರ ಆರೈಕೆ ಮಾನಸಿಕ ಏಕಾಗ್ರತೆಗೆ ಯೋಗ, ಧ್ಯಾನದಲ್ಲಿ ಭಾಗಿಯಾಗಬೇಕು

ದಾವಣಗೆರೆ, ನ.8- ವಿಕಲಚೇತನರಿಗೆ  ಆರೈಕೆ ಮಾಡಲು ಮಾನಸಿಕ ಶಾಂತತೆ, ಏಕಾಗ್ರತೆ, ಬದ್ದತೆಗಾಗಿ  ಯೋಗ, ಧ್ಯಾನ, ಮನರಂಜನಾತ್ಮಕ ಚಟುವಟಿಕೆಗಳಲ್ಲಿ ಪ್ರತಿದಿನ ಪಾಲ್ಗೊಳ್ಳಿ ಎಂದು ಆರೈಕೆಗಾರರನ್ನು ಉದ್ದೇಶಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ತಾಲೂಕು ಆರೋಗ್ಯ ಅಧಿಕಾರಿ  ಡಾ. ದೇವರಾಜ್ ಮಾತನಾಡಿದರು.        

ನಗರದ ಅಂಗವಿಕಲರ ಆಶಾಕಿರಣ ಟ್ರಸ್ಟ್  ಬುದ್ಧಿಮಾಂಧ್ಯ ಮಕ್ಕಳ ಭಾವೈಕ್ಯತೆ ಸಂಸ್ಥೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ  ಸಬಲೀಕರಣ ಇಲಾಖೆ ಹಾಗೂ  ಎಪಿಡಿ ಸಂಸ್ಥೆ, ಅಂಗವಿಕಲರ ಆಶಾಕಿರಣ ಟ್ರಸ್ಟ್, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ, ಮಾನಸಧಾರ  ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ ಮತ್ತು ಆರೈಕೆದಾರರ ಗುಂಪು ಇವರ ಸಹಯೋಗದಲ್ಲಿ ಏರ್ಪಡಿಸಲಾದ ವಿಶ್ವ ಆರೈಕೆದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರ ಆರೈಕೆಯಲ್ಲಿ ಆರೈಕೆದಾರರು ಪ್ರಮುಖ ಪಾತ್ರವನ್ನು ವಹಿಸುತ್ತಿರುವುದು ಶ್ಲ್ಯಾಘನೀಯ. ಪ್ರತಿಯೊಬ್ಬ ಆರೈಕೆದಾರರು ಎಲ್ಲಾ ವಿಧದ ವಿಕಲಚೇತನರಿಗೆ  ಆತ್ಮಸ್ಥೈರ್ಯ ತುಂಬುವುದರ ಜೊತೆಗೆ  ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಎಲ್ಲಾ ಆರೈಕೆದಾರರು ತಮ್ಮ ಮನೆಯಲ್ಲಿರುವ ವಿಕಲಚೇತನಗಳಿಗೆ  ಆರೈಕೆ ಮಾಡುವುದರ ಜೊತೆಗೆ  ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು. ಏಕೆಂದರೆ ಆರೈಕೆ ಮಾಡುವವರು ಎಷ್ಟು  ಮಾನಸಿಕವಾಗಿ  ಸದೃಢವಾಗಿರುತ್ತಾರೋ ಆಗ ಮಾತ್ರ ತೀವ್ರತರ ಕಾಯಿಲೆ ನ್ಯೂನತೆ ಇರುವ ವಿಕಲಚೇತನರಿಗೆ ಆರೈಕೆ ಮಾಡಲು ಸಾಧ್ಯ ಎಂದರು.

ಜಿಲ್ಲಾ ವಿಕಲಚೇತನರ  ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ  ಅಧಿಕಾರಿ ಡಾ. ಕೆ.ಕೆ  ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ  ವಿಕಲಚೇತನರ  ಅಭಿವೃದ್ಧಿಗಾಗಿ  ಹಲವು ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿಕಲಚೇತನರ  ಆರೈಕೆದಾರರಿಗೂ ಸ್ವಾಸ್ಥ್ಯ ಜೀವನವನ್ನು ನಡೆಸಲು  ಪೋಷಕ ಭತ್ಯೆ ಸೇರಿದಂತೆ  ಇನ್ನೂ ಅನೇಕ ಯೋಜನೆಗಳನ್ನು ಆರೈಕೆದಾರರಿಗೆ  ಸಹಾಯವಾಗಲಿ ಎಂದು ಜಾರಿಗೊಳಿಸಲಾಗಿದೆ ಎಂದರು

ಜಿಲ್ಲಾ ಆರೋಗ್ಯ ಇಲಾಖೆ ಮನೋವೈದ್ಯ ಡಾ. ಎಂ. ಸಂತೋಷ್ ಕುಮಾರ್ ಮಾತನಾಡಿದರು. ಅಂಗವಿಕಲರ ಆಶಾಕಿರಣ ಟ್ರಸ್ಟ್ ಅಧ್ಯಕ್ಷರಾದ ರಮಣ್ ಚಂದ್, ವಿಶೇಷ ಚೇತನರ ಆರೈಕೆದಾರರು ಹಾಗೂ ಆರ್.ಪಿ.ಡಿ ಟಾಸ್ಕ್‍ಫೋರ್ಸ್ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ, ವಿಕಲಚೇತನರ ಇಲಾಖೆ ಜಿಲ್ಲಾ ಸಂಯೋಜಕರು, ನಗರ ಮತ್ತು ಗ್ರಾಮೀಣ ಪುನರ್‍ವಸತಿ ಕಾರ್ಯಕರ್ತರಾದ ನಾಗರಾಜ್, ಅಂಗವಿಕಲರ ಆಶಾಕಿರಣ ಟ್ರಸ್ಟ್ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!