ಹರಿಹರ, ನ. 8 – ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಇವರ ಆಶ್ರಯದಲ್ಲಿ ಜಲ ಜಾಗೃತಿ ಕುರಿತು ಜನ ಜಾಗೃತಿಗಾಗಿ ನಿರ್ಮಲ ತುಂಗಭದ್ರಾ ಅಭಿಯಾನವನ್ನು ಶೃಂಗೇರಿಯಿಂದ ಕಿಷ್ಕಿಂಧೆವರೆಗೆ ಬೃಹತ್ ಪಾದಯಾತ್ರೆಯನ್ನು ಇಂದಿನಿಂದ ಆಯೋಜಿಸಲಾಗಿದೆ.
ಶೃಂಗೇರಿಯಿಂದ ಹೊರಟಿರುವ ಬೃಹತ್ ಪಾದಯಾತ್ರೆಯು ಇದೇ ದಿನಾಂಕ 13 ರಂದು ಹೊನ್ನಾಳಿ ತಾಲ್ಲೂಕಿನ ಕೋಣನ ತಲೆಯಿಂದ, ಹರಿಹರ ತಾಲ್ಲೂಕಿನ ಗೋವಿನಹಾಳು ಗ್ರಾಮಕ್ಕೆ ಆಗಮಿಸಲಿದೆ. ಗೋವಿನಹಾಳು ಗ್ರಾಮದಿಂದ ನಂದಿಗುಡಿ ಮಾರ್ಗವಾಗಿ ಕಡರ ನಾಯಕನಹಳ್ಳಿ ತಲುಪಿ ಅಲ್ಲಿ ಬಹಿರಂಗ ಸಭಾ ಕಾರ್ಯಕ್ರಮ ನಡೆಸಿ ಸಭಾ ಕಾರ್ಯಕ್ರಮ ಮುಗಿದ ನಂತರ, ಅಲ್ಲಿಂದ ಹೊಸಳ್ಳಿಯ ವೇಮನ ಮಠಕ್ಕೆ ತಲುಪಿ ವಾಸ್ತವ್ಯ ಹೂಡಲಾಗುತ್ತದೆ.
ನಂತರ ನ 14 ರ ಬೆಳಿಗ್ಗೆ ವೇಮನ ಮಠದಿಂದ ಪಾದಯಾತ್ರೆ ಆರಂಭವಾಗಿ ಬಿಳಸನೂರು ಮಾರ್ಗವಾಗಿ ಮಧ್ಯಾಹ್ನ ರಾಜನಹಳ್ಳಿ ತಲುಪಲಿದೆ. ಅಲ್ಲಿ ಭೋಜನ ಮುಗಿಸಿ ಮತ್ತೆ ಪಾದಯಾತ್ರೆ ಆರಂಭವಾಗಿ ಹರಿಹರ ತಲುಪಿ ಸಭಾ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮ ಮುಗಿದ ನಂತರ ಕೋಡಿಯಾಲ ಹೊಸಪೇಟೆ, ಕುಮಾರ ಪಟ್ಟಣಂನ ಪುಣ್ಯಕೋಟಿ ಮಠ ವನ್ನು ತಲುಪಿ ವಾಸ್ತವ್ಯ ಹೂಡಲಾಗುತ್ತದೆ.
ಪಾದಯಾತ್ರೆ ಕಾರ್ಯಕ್ರಮ ಕುರಿತು ಮೇಲೆ ತಿಳಿಸಲಾದ ಗ್ರಾಮಗಳ ಜನರಿಗೆ, ಊರ ಮುಖಂಡರಿಗೆ ಮಾಹಿತಿ ನೀಡಿ, ಜೊತೆಗೆ ಸಹಕಾರವನ್ನು ಕೋರಲು, ಅಭಿ ಯಾನ್ ಸಂಚಾಲಕ ವೀರೇಶ ಅಜ್ಜಣ್ಣನವರ, ಶಾಂತಕುಮಾರಿ, ಅಣ್ಣೇಶ ಐರಣಿ, ಗೋವಿನಹಾಳು ರಾಜಣ್ಣ, ಮಹಾಂತೇಶ ಕಡರನಾಯಕನಹಳ್ಳಿ, ಕುಮಾರ ಮಲೇಬೆನ್ನೂರು, ಪತ್ರಕರ್ತ ಸಂತೋಷ ಗುಡಿಮನಿ, ಸಿಂಗಾಡಿ ಹನುಮಂತ, ವಿನಯ ಕಾಶಿ, ಸೇರಿದಂತೆ ಅನೇಕರು ಉಕ್ಕಡಗಾತ್ರಿ, ನಂದಿಗುಡಿ, ಗೋವಿನಹಾಳು, ಕಡರನಾಯಕನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಪಾದಯಾತ್ರೆಯ ಕುರಿತು ಗುರುವಾರ ಜಾಗೃತಿ ಮೂಡಿಸಿದರು.