ಡಿಆರ್‍ಡಿಒ ಇಂಡಸ್ಟ್ರಿ ಅಕಾಡೆಮಿ ನಿರ್ದೇಶಕ ಡಾ. ಸುಧೀರ್ ಕಾಮತ್
ದಾವಣಗೆರೆ, ನ.8- ಸಾಫ್ಟ್‌ವೇರ್ ಮತ್ತು ಹಾರ್ಡ್‍ವೇರ್ ಕಂಪನಿಗಳಲ್ಲಿ ಸೋಲು-ಗೆಲುವು ಸಹಜ, ಆದರೆ ಕೆಲಸದಲ್ಲಿನ ಕೌಶಲ್ಯ ಗಳಿಂದ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಬ ಹುದು ಎಂದು ಡಿಆರ್‍ಡಿಒ ಇಂಡಸ್ಟ್ರಿ ಅಕಾಡೆಮಿ ನಿರ್ದೇಶಕ ಡಾ. ಸುಧೀರ್ ಕಾಮತ್ ತಿಳಿಸಿದರು.
ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಬೆಂಗಳೂರಿನ ಐಬಿಎಂನ ಮಾಜಿ ನಾಯಕತ್ವ ತರಬೇತುದಾರ ಬರ್ಟ್ ಚೆರಿಯನ್ ಅವರು ಗಾಂಧೀಜಿಯವರ ಆದರ್ಶಗಳು ಹಾಗೂ ಹಲವಾರು ಕಥಾ ಪಾತ್ರಗಳನ್ನು ಪರಿಚಯಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.
ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ ಮಾತನಾಡಿ, ಸಂಸ್ಥೆಯ ಬೆಳವಣಿ ಗೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ದೊರೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಎಂ.ವಿವಿ ಕುಲಪತಿ ಜಿ.ಎಂ.ಲಿಂಗರಾಜು ಮಾತನಾಡಿ, ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗಳು ಪದವಿ ಪ್ರವೇಶ ಪಡೆದ ಮೇಲೆ ವಿದ್ಯಾಭ್ಯಾಸ, ಜೀವನ ಪಾಠ ಸಂಸ್ಕಾರ ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತಿಳಿಸಿ ದರು. ಜಿ.ಎಂ. ವಿಶ್ವವಿದ್ಯಾಲಯದ ಉಪಕುಲ ಪತಿ ಡಾ. ಎಸ್.ಆರ್.ಶಂಕಪಾಲ್, ಪ್ರಭಾರ ಉಪಕುಲಪತಿ ಡಾ. ಹೆಚ್.ಡಿ.ಮಹೇಶಪ್ಪ, ಕುಲಸಚಿವ ಡಾ.ಸುನೀಲ್ ಕುಮಾರ್ ಬಿ.ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕರಾದ ಶೃತಿ ಆರ್.ಎನ್ ಮತ್ತು ವಸುಧ ಎಂ.ಎಂ.ಜೆ ಕಾರ್ಯಕ್ರಮ ನಿರೂಪಿಸಿದರು.