ಕನ್ನಡ ಪರ ಕೆಲಸಗಳಿಗೆ ಸಂಘಟನೆಗಳು ಸದಾ ಸಿದ್ಧ: ಶಿವಕುಮಾರ್

ಕನ್ನಡ ಪರ ಕೆಲಸಗಳಿಗೆ ಸಂಘಟನೆಗಳು ಸದಾ ಸಿದ್ಧ: ಶಿವಕುಮಾರ್

ದಾವಣಗೆರೆ, ನ.8- ಕನ್ನಡ ಪರವಾದ ಕೆಲಸಗಳಿಗೆ ಕನ್ನಡ ಪರ ಸಂಘಟನೆಗಳು ಸದಾ ಸಿದ್ದವಾಗಿರುತ್ತವೆ ಎಂದು ಕನ್ನಡಮ ಪರ ಹೋರಾಟಗಾರ ಕೆ. ಜಿ. ಶಿವಕುಮಾರ್ ಹೇಳಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಕರ್ನಾಟಕ ರಾಜ್ಯೋತ್ಸ ವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡದ ಕೆಲಸಗಳು ನೂರಕ್ಕೆ ನೂರರಷ್ಟು ಆಗಬೇಕು. ಅಲ್ಲಿಯವರೆಗೆ ನಮಗೆ ತೃಪ್ತಿ ಇಲ್ಲ, ಕನ್ನಡಕ್ಕಾಗಿ ಹೋರಾಟಗಳು ಹಿಂದೆಯೂ ಇದ್ದವು, ಮುಂದೆಯೂ ಮುಂದುವರೆಯುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಅನ್ನಪೂರ್ಣ ರವಿ ಮಾತನಾಡಿ, ಅನ್ಯಭಾಷಿಗರ ಜೊತೆಯೂ ಕನ್ನಡವನ್ನೇ ಮಾತನಾಡಿ, ನಮ್ಮ ಭಾಷೆಯನ್ನು ಅವರಿಗೂ ಕಲಿಸುವ ಕೆಲಸಗಳಾಗಬೇಕು ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ವಹಿಸಿದ್ದರು, ಅಣಬೇರು ತಾರೇಶ್ ಕೆ.ಪಿ. ಹಾಗೂ ಸುನೀತ ಪ್ರಕಾಶ್ ನಿರೂಪಿಸಿದರು.  ವೀರೇಶ್ ಬಿ. ಎಮ್. ಜಿ.  ವೀರಭದ್ರಪ್ಪ ತೆಲಿಗಿ, ಶಿವಯೋಗಿ ಹಿರೇಮಠ್, ಎಮ್. ಬಸವರಾಜ್,
ಫಕ್ಕಿರೇಶ್ ಆದಾಪುರ, ಓಂಕಾರಯ್ಯ ತವನಿಧಿ, ಹಾಗೂ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು.

error: Content is protected !!