ದಾವಣಗೆರೆ, ನ. 7 – ಹಿಮಾಚಲ ಪ್ರದೇಶ ದಲ್ಲಿ ಕಳೆದ ವಾರ ನಡೆದ 49ನೇ ರಾಷ್ಟ್ರೀಯ ಮಟ್ಟದ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಯೋಗ ಸ್ಪರ್ಧೆಯಲ್ಲಿ ಹರಿಹರ ಗಿರಿರಾಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ವೈ.ಸೃಷ್ಟಿ ದ್ವಿತೀಯ ಸ್ಥಾನ ಪಡೆದು, ಅಂತರರಾಷ್ಟ್ರೀಯ ಮಟ್ಟದ ಯೋಗ ಫೆಡರೇಷನ್ ಕಪ್ಗೆ ಆಯ್ಕೆಯಾಗಿದ್ದಾಳೆ. ಸಿಂಗಾಪುರದಲ್ಲಿ ಡಿಸೆಂಬರ್ ಕೊನೆ ವಾರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಯೋಗ ಫೆಡರೇಷನ್ ಕಪ್ನಲ್ಲಿ ಕೆ.ವೈ.ಸೃಷ್ಟಿ ಭಾಗವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ಕೆ.ವೈ.ಸೃಷ್ಟಿ ಆಯ್ಕೆ
