ಹರಪನಹಳ್ಳಿಯಲ್ಲಿ ನೇತ್ರ ತಪಾಸಣಾ ಶಿಬಿರದಲ್ಲಿ ಪಿ.ಜಿ. ಮಹೇಶ್ವರಪ್ಪ
ಹರಪನಹಳ್ಳಿ,ನ.8- ಅಂಗಾಂಗಗಳಲ್ಲಿ ಕಣ್ಣು ಅತಿ ಮಹತ್ವದಾಗಿದೆ. ಕಣ್ಣಿನ ದೃಷ್ಟಿಯಿಂದಲೇ ನಮ್ಮ ದಿನನಿತ್ಯದ ಜೀವನ ಸಾಗಿಸಲು ಹಾಗೂ ನಮ್ಮ ಸುಂದರ ಜೀವನ ನೋಡಲು ಸಾಧ್ಯ ಎಂದು ನೇತ್ರ ಅಧಿಕಾರಿ ಪಿ.ಜಿ.ಮಹೇಶ್ವರಪ್ಪ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ವಿಜಯನಗರ, ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ನೇತ್ರದಾನ ಮಹಾದಾನ’ ಆದ್ದರಿಂದ ನಾವು ಸತ್ತ ನಂತರ ಈ ಸುಂದರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ ನೇತ್ರದಾನ ಮಾಡುವುದರ ಮೂಲಕ ಅಂಧರ ಬಾಳಿನಲ್ಲಿ ಆಶಾಕಿರಣ ಬೆಳಕಾಗೋಣ. ಎಲ್ಲರೂ ನೇತ್ರದಾನ ಮಾಡೋಣ ಎಂದ ಅವರು ಹೇಳಿದರು.
ಶಿವಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ರೂಪ, ಡಾ.ನಿಖಿಲ, ನೇತ್ರಾ ಸಹಾಯಕ ಮಹೇಶ್ವರಪ್ಪ, ಬಾಲಚಂದ್ರ, ಅನಿಲ್ ಕುಮಾರ್, ರೇಖಾ, ಸಿಂಧು ಪಾಟೀಲ್, ಶಿವಕುಮಾರ್ ಮತ್ತು ಇತರರು ಭಾಗವಹಿಸಿದ್ದರು.