ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಅಧ್ಯಕ್ಷ ಸಿಎ ಉಮೇಶ್ ಶೆಟ್ಟಿ
ದಾವಣಗೆರೆ, ನ.7- ವಿಶ್ವಾಸಾರ್ಹತೆಯ ಕ್ರೆಡಿಟ್ ಸೊಸೈಟಿ ಎಂದೇ ಸಾರ್ವಜನಿಕ ವಲಯದಲ್ಲಿ ಛಾಪು ಮೂಡಿಸಿರುವ ಕರಾವಳಿ ಸೌಹಾರ್ದ ಪತ್ತಿನ ಸಹಕಾರ ಸಂಘವು 25ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ಪಾದಾ ರ್ಪಣೆ ಮಾಡಿದೆ ಎಂದು ಹಿರಿಯ ಲೆಕ್ಕ ಪರಿಶೋಧಕರೂ ಆಗಿರುವ ಸಂಘದ ಅಧ್ಯಕ್ಷ ಸಿಎ ಉಮೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
ಇಲ್ಲಿನ ಡಾ. ಶಾಮಸುಂದರ ಶೆಟ್ಟಿ ಬಂಟರ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಕರಾವಳಿ ಸೌಹಾರ್ದ ಪತ್ತಿನ ಸಹ ಕಾರ ಸಂಘದ 24ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂಘದ ಬೆಳ್ಳಿ ಹಬ್ಬವನ್ನು ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಆಚರಿಸುವುದಲ್ಲದೇ ಬೆಳ್ಳಿ ಮಹೋತ್ಸವ ಸಮಾ ರಂಭವನ್ನು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಆಚರಿಸಲು ಸಂಘದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಕರಾವಳಿ ಪತ್ತಿನ ಸಹಕಾರಿಯು ಕಳೆದ 24 ವರ್ಷಗಳಿಂದ ಪ್ರಗತಿಯನ್ನು ಕಾಯ್ದಕೊಂಡು ಬಂದಿದ್ದು, ಇದು ಸಂಘದ ಸದಸ್ಯರು, ಠೇವಣಿದಾರರು ಮತ್ತು ಸಾರ್ವಜನಿಕರ ವಿಶ್ವಾಸಾರ್ಹತೆಯ ಪ್ರತಿಬಿಂಬ ಎಂದು ಉಮೇಶ್ ಶೆಟ್ಟಿ ಅವರು ವಿಶ್ಲೇಷಿಸಿ, ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ಸಂಘದ ಪ್ರಗತಿಯ ಚಿತ್ರಣವನ್ನು ಸಭೆಯ ಮುಂದಿಟ್ಟ ಸಂಘದ ಹಿರಿಯ ನಿರ್ದೇಶಕ ಸೀತಾರಾಮ ಶೆಟ್ಟಿ, 2024 ಮಾರ್ಚ್ ಅಂತ್ಯಕ್ಕೆ 3225 ಜನ ಸದಸ್ಯರುಗಳಿಂದ 54 ಲಕ್ಷ ರೂ. ಷೇರು ಬಂಡವಾಳ ಹೊಂದಿದ್ದು, 9 ಕೋಟಿ ರೂ. ಗಳಷ್ಟು ಸ್ವಂತ ನಿಧಿ ಸಂಘಕ್ಕಿದೆ. 21.10 ಕೋಟಿ ರೂ. ಠೇವಣಿ ಹೊಂದಿರುವ ಈ ಸಂಘವು, ಸದಸ್ಯರಿಗೆ ಅವರ ಅಗತ್ಯಗನುಗುಣವಾಗಿ 18 ಕೋಟಿ ರೂ.ಗಳಷ್ಟು ಸಾಲ-ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಕುಂದುವಾಡ ರಸ್ತೆಯಲ್ಲಿ ತನ್ನದೇ ಆದ ಸ್ವಂತ ಕಟ್ಟಡ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರಾವಳಿ ಸಹಕಾರಿಯು 71 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ. 14ರಂತೆ ಲಾಭಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಸಂಘದ ಸದಸ್ಯರ ಚಪ್ಪಾಳೆಗಳ ಮಧ್ಯೆ ಸೀತಾರಾಮ ಶೆಟ್ಟಿ ಘೋಷಿಸಿದರು.
ಕಳೆದ ಸಾಲಿನ ಮಹಾಸಭೆಯ ನಡಾವಳಿಗಳನ್ನು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಖಲೀಲ್ ಅಹ್ಮದ್ ಅವರು ಓದಿ ದಾಖಲು ಮಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯ ಪ್ರತಿಭಾನ್ವಿತ ರಾದ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಯಿತು. ಅಲ್ಲದೇ, ದೇಶ ರಕ್ಷಣೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಮಾಜಿ ಸೈನಿಕರುಗಳಾದ ಶಶಿಕಾಂತ್ ಮತ್ತು ವಿನೋಬ ಪಾಟೀಲ್ ಅವರುಗಳನ್ನು ಶಾಲು ಹೊದಿಸುವುದರ ಮೂಲಕ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಮಹೇಶ್ ಆರ್. ಶೆಟ್ಟಿ ಮಾತನಾಡಿ, ಸಂಘದ ಆಡಳಿತ ಮಂಡಳಿ ಸದಸ್ಯರ ಶ್ರಮ, ಸಿಬ್ಬಂದಿ ವರ್ಗದವರ ಕಾರ್ಯಶೀಲತೆ, ಸದಸ್ಯರ ಮತ್ತು ಗ್ರಾಹಕರ ಪ್ರೋತ್ಸಾಹ, ಠೇವಣಿದಾರರ ವಿಶ್ವಾಸಾರ್ಹತೆ, ಸಾರ್ವಜನಿಕರ ನಂಬಿಕೆಯಿಂದಾಗಿ ಈ ಸಂಘವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪರಿಶೋಧಿತ ಲೆಕ್ಕ ಪತ್ರವನ್ನು ಸಂಘದ ಉಪಾಧ್ಯಕ್ಷ ಮಹೇಶ್ ಆರ್. ಶೆಟ್ಟಿ ಓದಿದರು. ಸಂತೋಷ್ ಅವರ ಪ್ರಾರ್ಥನೆ ನಂತರ ಸಂಘದ ನಿರ್ದೇಶಕ ದಿನೇಶ್ ಕೆ. ಶೆಟ್ಟಿ ಸ್ವಾಗತಿಸಿದರು. ಡಾ. ನಿತೇಶ್ ರಾಜ್ ಶೆಟ್ಟಿ ವಂದಿಸಿದರು.
ಸಂಘದ ನಿರ್ದೇಶಕರುಗಳಾದ ರವೀಂದ್ರ ಎಸ್. ಶೆಟ್ಟಿ, ಡಾ. ಸುಬೋದ್ ಶೆಟ್ಟಿ, ಕೆ. ಮೋಹನ್ ದಾಸ್ ಶೆಟ್ಟಿ, ಶ್ರೀಮತಿ ಆಶಾ ಕುಶಾಲ್ ಶೆಟ್ಟಿ, ಶ್ರೀಮತಿ ವಿಮಲಾ ಎಸ್. ಶೆಟ್ಟಿ, ಹೆಚ್.ಎನ್. ವೆಂಕಟೇಶ್, ವಿಶೇಷ ಆಹ್ವಾನಿತರಾದ ಬಿ. ಸದಾಶಿವಶೆಟ್ಟಿ, ಅರುಣ್‌ಕುಮಾರ್ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ಎಂ. ಪ್ರಭಾಕರ್ ಶೆಟ್ಟಿ, ಕಿಶನ್ ಚಂದ್ರಶೆಟ್ಟಿ, ಹಿರಿಯ ಸಲಹೆಗಾರರಾದ ಎಸ್. ಸೀತಾರಾಮ ಶೆಟ್ಟಿ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ವರ್ಗದವರಾದ ಲೆಕ್ಕಾಧಿಕಾರಿ ಶ್ರೀಮತಿ ಬಿ. ಮಮತಾ, ಲೆಕ್ಕ ಸಹಾಯಕರಾದ ಆಕಾಶ್ ಪೂಜಾರಿ ಮತ್ತು ಕಾವ್ಯಶ್ರೀ, ಸಹಾಯಕರುಗಳಾದ ಡಿ.ಪಿ. ಯೋಗೇಶ್, ಪಿ. ಮುರುಳಿ ಕಾರ್ತಿಕ್ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಪಿಗ್ಮಿ ಸಂಗ್ರಹಕಾರರಾದ ಹರೀಶ್ ಶೆಟ್ಟಿ, ಹೆಚ್. ಜಯಕರ ಶೆಟ್ಟಿ, ಸಿ. ವಾಮದೇವಯ್ಯ, ಜಿ.ಎಂ. ಭರಮಪ್ಪ, ಡಿ.ಪಿ. ರಮೇಶ್, ಡಿ.ಸಿ. ರಮೇಶ್, ಎ.ಎನ್. ಶಿವಕುಮಾರ್, ಅಮರಯ್ಯ ಹಿರೇಮಠ, ಕೆ ಆರೀಫುಲ್, ಬಿ. ಹನುಮೇಶ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.