ಮಲೇಬೆನ್ನೂರು, ನ.7- ಉಕ್ಕಡಗಾತ್ರಿ ಗ್ರಾಮದ ಶ್ರೀನಿವಾಸ್ ಕುಲಕರ್ಣಿ ಅವರ ಗದ್ದೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಯಾಂತ್ರೀಕೃತ ಭತ್ತದ ನಾಟಿ ಮಾಡಿದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಅಶೋಕ್ ಮತ್ತು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರು ಡಾ ಮಲ್ಲಿಕಾರ್ಜುನ್ ಅವರು, ಭತ್ತದ ಬೇಸಾಯದ ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟರು.
ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಕೃಷಿ ಅಧಿಕಾರಿ ಇನಾಯತ್, ಧರ್ಮಸ್ಥಳ ಯೋಜನೆಯ ಕೃಷಿ ಅಧಿಕಾರಿ ಎಸ್.ಮನೋಹರ್, ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕ ಜಿಗಳಿಯ ರಾಕೇಶ್, ಯಂತ್ರ ನಾಟಿ ಬ್ಯಾಂಕ್ ಮೇಲ್ವಿಚಾರಕ ಸುನೀಲ್, ನೋಡಲ್ ಅಧಿಕಾರಿ ಚಿನ್ ಮೂರ್ತಿ ಮತ್ತು ಉಕ್ಕಡಗಾತ್ರಿ, ಪತ್ಯಪುರ ಸೇವಾ ಪ್ರತಿನಿಧಿ ವಾಣಿ, ಕೃಷಿ ಸಖಿ ಪ್ರಗತಿಪರ ರೈತರು ಭಾಗವಹಿಸಿದ್ದರು. ಪ್ರಗತಿಪರ ರೈತ ಶ್ರೀನಿವಾಸ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.