ಜಗಳೂರು: ಬೆಳೆಹಾನಿ ಪರಿಹಾರ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಿಸಲು ಆಗ್ರಹ

ಜಗಳೂರು: ಬೆಳೆಹಾನಿ ಪರಿಹಾರ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಿಸಲು ಆಗ್ರಹ

ಜಗಳೂರು, ನ. 7- ಹಿಂಗಾರು ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ನಂಜುಂಡಸ್ವಾಮಿ ಬಣ)ದಿಂದ ಪ್ರತಿಭಟನೆ ನಡೆಸಲಾಯಿತು‌.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಅರ್ಜಿ ಸ್ವೀಕರಿಸಲು ಕೈಯಲ್ಲಿ ಅರ್ಜಿ ಹಿಡಿದು ಆಗ್ರಹಿಸಿದರು.

ತಾಲ್ಲೂಕಿನಾದ್ಯಂತ ಅತಿವೃಷ್ಠಿಯಿಂದ ರೈತರ ಜಮೀನುಗಳು ಜಲಾವೃತಗೊಂಡು ಬೆಳೆಹಾನಿಗೊಳಗಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. 

ಸರ್ಕಾರದಿಂದ ಹಿಂಗಾರು ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸ್ವೀಕರಿಸಲು ನವೆಂಬರ್ 6 ಕೊನೆ ದಿನಾಂಕ ನಿಗದಿಗೊಳಿಸಿದ್ದು ಮಾಹಿತಿ ಕೊರತೆಯಿಂದ ಬಹುತೇಕ ಅರ್ಹ ರೈತರು  ಪರಿಹಾರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಕಾಲಾವಕಾಶ ನೀಡಿ ದಿನಾಂಕ ವಿಸ್ತರಣೆ ಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು  ಕಾರ್ಯದರ್ಶಿ ಭರಮಸಮುದ್ರ ಕುಮಾರ್ ಮನವಿ ಮಾಡಿದರು.

ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮಾತನಾಡಿ, ಸರ್ಕಾರದ ಆದೇಶದಂತೆ ಅರ್ಜಿ ಸಲ್ಲಿಕೆಗೆ ಅವಧಿ ಮುಕ್ತಾಯಗೊಂಡಿದ್ದು. ರೈತರ ಹಿತದೃಷ್ಟಿಯಿಂದ ನ.7 ಸಂಜೆವರೆಗೂ ದಿನಾಂಕ ವಿಸ್ತರಿಸಲಾಗಿದೆ. ಹೆಚ್ಚಿನ ಬೇಡಿಕೆಗೆ ಜಿಲ್ಲಾಧಿಕಾರಿಗಳಿಗೆ ಸಂಪರ್ಕಿಸಲು ರೈತ ಸಂಘಟನೆ ಮುಖಂಡರುಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ತಿಮ್ಲಾಪುರ ಸೂರಪ್ಪ, ವಾಸಣ್ಣ, ಪಾಲನಾಯಕಪ್ಪ, ಮಾರಪ್ಪ ಮುಂತಾದವರು ಭಾಗವಹಿಸಿದ್ದರು.

error: Content is protected !!