ದಾವಣಗೆರೆ, ನ.7- ಶ್ರೀ ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್ ವತಿಯಿಂದ ಎವಿಕೆ ರಸ್ತೆಯಲ್ಲಿನ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯದ ಮೈದಾನ ದಲ್ಲಿ ಬರುವ ಡಿಸೆಂಬರ್ 15ರ ಭಾನುವಾರ ಬೆಳಗ್ಗೆ 11.30ಕ್ಕೆ ಗುರು ರಾಮದಾಸರ 66ನೇ ಹಾಗೂ ಕೊಂಡಯ್ಯ ಸ್ವಾಮಿಗಳ 18ನೇ ಪುಣ್ಯಾರಾಧನೆ ಜತೆಗೆ ಮಾದಿಗ ಸಮಾಜದ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟಿನ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು 33ನೇ ವರ್ಷದ ಸಾಮೂಹಿಕ ಸರ್ವ ಧರ್ಮೀಯರ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ 33ನೇ ವರ್ಷದ ಗುರು ಮಾದಾರ ಚನ್ನಯ್ಯ ಸ್ವಾಮಿಯವರ ಜಯಂತ್ಯುತ್ಸವ ಏರ್ಪಡಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಮಾದಿಗರ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಆಹಾರ, ನಾಗರಿಕರ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಹೆಚ್. ಆಂಜನೇಯ, ಬಿ.ಎನ್. ಚಂದ್ರಪ್ಪ, ಶಾಸಕ ರಾದ ಕೆ.ಎಸ್. ಬಸವಂತಪ್ಪ, ಬಸವ ರಾಜ ಶಿವಗಂಗಾ ಮಾಜಿ ಸಚಿವ ಎಸ್.ಎ ರವೀಂದ್ರ ನಾಥ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಶಾಸಕರು ಪಾಲ್ಗೊಳ್ಳಲಿ ದ್ದಾರೆ ಎಂದು ಮಾಹಿತಿ ನೀಡಿದರು.
ಎಸ್ಸಿ ವಿಭಾಗದಲ್ಲಿನ ಎಲ್ಲಾ ಜನಾಂಗದವರು ಸಮಾವೇಶದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಎಲ್ಲರೂ ಒಕ್ಕೊರಲಿನಿಂದ ಸುಪ್ರೀಂ ಕೋರ್ಟ್ ತೀರ್ಪಿನಂತೆ ಸದಾಶಿವ ಆಯೋಗದ ಮೀಸಲಾತಿ ವರದಿಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಟ್ರಸ್ಟಿನ ಖಜಾಂಚಿ ಬಿ.ಎಂ. ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಆರ್. ಶಿವಮೂರ್ತಿ, ಮುಖಂಡರಾದ ಎನ್. ರುದ್ರಮುನಿ, ಶೇಖರಪ್ಪ, ಎಲ್.ಡಿ ಗೋಣೆಪ್ಪ, ಹೆಚ್. ಮಲ್ಲೇಶ್, ಎಂ. ಗುರುಮೂರ್ತಿ, ಅಂಜಿನಪ್ಪ, ಮಲ್ಲೇಶಪ್ಪ, ನಾಗರಾಜಪ್ಪ, ಹೆಗ್ಗೆರೆ ರಂಗಪ್ಪ, ಜಿ.ರಾಕೇಶ್, ಹರೀಶ್, ಮಲ್ಲಿಕಾರ್ಜುನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.