ಕೂನಬೇವು ರಸ್ತೆ ಸಮಸ್ಯೆ : ಶಾಸಕರ ತೀರ್ಮಾನಕ್ಕೆ ಹೋರಾಟಗಾರರ ಸಹಮತ

ಕೂನಬೇವು ರಸ್ತೆ ಸಮಸ್ಯೆ : ಶಾಸಕರ ತೀರ್ಮಾನಕ್ಕೆ ಹೋರಾಟಗಾರರ ಸಹಮತ

ರಾಣೇಬೆನ್ನೂರು, ನ. 6- ಪಟ್ಟಣದ ಹೊರವಲಯ ದಲ್ಲಿ ಕೂನಬೇವು ರಸ್ತೆಗೆ    ಸುಸಜ್ಜಿತ ಅಂಡರ್‍ಬ್ರಿಡ್ಜ್ ಆಗಬೇಕು. ಇಲ್ಲವೇ 150 ಅಡಿ ರಿಂಗ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ಮಾಡುತ್ತಿರುವ  ಕೂನಬೇವು ಗ್ರಾಮಸ್ಥರು ಮತ್ತು ರೆಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯವರು  ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ 57 ರ ಕೂನಬೇವು ರಸ್ತೆಯನ್ನು ದಾಟಿಹೋಗುವ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಹೋರಾಟಗಾರರ ಬೇಡಿಕೆಯಂತೆ ರಸ್ತೆ ನಿರ್ಮಾಣ ವಾಗುತ್ತಿಲ್ಲ. ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದರೆ ರಸ್ತೆ ಅಪಘಾತಗಳಾಗುವುದಿಲ್ಲ. ಅದನ್ನು ಬಿಟ್ಟು ಅವೈಜ್ಞಾನಿ ಕವಾಗಿ ರಸ್ತೆ ನಿರ್ಮಿಸಿದರೆ ರಸ್ತೆ ಕ್ರಾಸಿಂಗ್ ಹತ್ತಿರ ದಿನನಿತ್ಯ ರಸ್ತೆ ಅಪಘಾತ ಗಳಾಗಿ ಅನೇಕ ಸಾವು ನೋವುಗಳಾಗುತ್ತವೆ. 

ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಈ ಸ್ಥಳದಲ್ಲಿ ಸುಸಜ್ಜಿತ ಅಂಡರ್‍ಬ್ರಿಡ್ಜ್ ಆಗಬೇಕು. ಇಲ್ಲವೇ   ರಿಂಗ್ ರಸ್ತೆ ನಿರ್ಮಿಸಬೇಕೆಂದು ಈಗಾ ಗಲೇ  3-4 ಬಾರಿ ಪ್ರತಿಭಟನೆ ಮಾಡಿ ಕಳೆದ  2 ತಿಂಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ಮೊನ್ನೆ ದಿವಸ ಶಾಸಕ ಬಸವರಾಜ ಶಿವಣ್ಣನವರ ಮಧ್ಯಸ್ಥಿಕೆಯಲ್ಲಿ ಹೋರಾಟ ಗಾರರು, ಗ್ರಾಮಸ್ಥರು, ಗುತ್ತಿಗೆದಾರರು, ತಹಶೀಲ್ದಾರರು, ಅಧಿಕಾರಿಗಳು ಮಧ್ಯ ಸುದೀರ್ಘ ಚರ್ಚೆ ಕೂಡಾ ನಡೆದಿದೆ.    

ಅಂತಿಮವಾಗಿ ಶಾಸಕ  ಬಸವರಾಜ ಶಿವಣ್ಣನವರ ತೀರ್ಮಾನಕ್ಕೆ ನಾವು ಬದ್ಧ ಎಂದು ಹೋರಾಟಗಾರರು ತಿಳಿಸಿದಾಗ ಶಾಸಕರು ಮಾತನಾಡಿ, ಅಂಡರ್‍ಬ್ರಿಡ್ಜ್ ಅಥವಾ ರಿಂಗ್ ರಸ್ತೆಗೆ ಎಸ್ಟಿಮೇಟ್ ಮಾಡಿಸಿ ಯಾವುದಕ್ಕೆ ತಾಂತ್ರಿಕ ಇಲಾಖೆ ಮಂಜೂರಾತಿ ಕೊಡುತ್ತದೆಯೋ ಅದನ್ನು ಮಾಡೋಣ. ಅಲ್ಲಿಯವರೆಗೂ ಈ ಸ್ಥಳದಲ್ಲಿ ಮಾತ್ರ ಕಾಮಗಾರಿ ಸ್ಥಗಿತಗೊಳಿಸಿ, ಮುಂದೆ ಕಾಮಗಾರಿ ಮುಂದುವರಿಸಿರಿ ಎಂದು ಗುತ್ತಿಗೆ ಪಡೆದ ಕಂಪನಿ ಮುಖ್ಯಸ್ಥರಿಗೆ ಸೂಚಿಸಿದರು. ಅದಕ್ಕೆ ಅಧಿಕಾರಿಗಳು, ತಾಂತ್ರಿಕ ವರ್ಗದವರು ಸಮ್ಮತಿ ಸೂಚಿಸಿದರು. 

ಈ ಸಂದರ್ಭದಲ್ಲಿ ರೆಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷ  ರವೀಂದ್ರಗೌಡ ಎಫ್. ಪಾಟೀಲ, ತಹಶೀ ಲ್ದಾರ್ ಹೆಚ್.ಕೆ. ಭಗವಾನ್‌, ಎಪಿಎಂಸಿ ಮಾಜಿ ಅಧ್ಯಕ್ಷ ಏಕನಾಥ ಭಾನವಳ್ಳಿ, ಬಸವ ರಾಜ ಸವಣೂರ, ಮೈಲಾರಪ್ಪ ಮಾಳಗುಡ್ಡಪ್ಪ ನವರ, ಮಾಲತೇಶ ಮಾಸಣಗಿ, ಮಲ್ಲಿಕಾರ್ಜುನ ಗಾಣಗೇರ, ಶಿವಣ್ಣ ಬಡಪ್ಪನವರ, ಮೈಲಾರಪ್ಪ ನೆಗಳೂರು, ಧರ್ಮಣ್ಣ ಲಮಾಣಿ, ಗುತ್ತಿಗೆ ಪಡೆದಿರುವ  ಸದ್ಭವ  ಕಂಪನಿಯ ಇಂಜಿನಿಯರ್ ದೇವರಾಜ, ಕೆಶಿಪ್ ಅಧಿಕಾರಿಗಳು,   ಕೂನಬೇವು ಗ್ರಾಮಸ್ಥರು, ಕಂದಾಯ ಮತ್ತು ಪೊಲೀಸ್ ಇಲಾಖೆಯವರು ಇದ್ದರು.

error: Content is protected !!