ದಾವಣಗೆರೆ, ನ. 4 – ನಗರದ ನಾಮದೇವ ಸಿಂಪಿ ಸಮಾಜದ ಸಂತ ಸಕ್ಕೂಬಾಯಿ ಮಹಿಳಾ ಮಂಡಳಿಗೆ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾಬಾಯಿ ಪಿಸೆ ಅವರು ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀಬಾಯಿ ಕಂಚಿಕೇರಿ, ಶ್ರೀಮತಿ ಶ್ಯಾಮಲಾ ಬೊಂಗಾಳೆ, ಶೋಭಾ ಖಟಾವ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾ ದಾವಸ್ಕರ್, ಎಂ.ವಿ. ನಿರ್ಮಲ, ಸಹ ಕಾರ್ಯದರ್ಶಿಗಳಾಗಿ ಲಕ್ಷ್ಮೀ ಆನಂದ ಕಾಕಡೆ, ಖಜಾಂಚಿಯಾಗಿ ರೇಖಾ ವಿಠ್ಠಲ ರಾಕುಂಡೆ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ವಿ. ಲೀಲಾವತಿ, ಸಂಚಾಲಕರಾಗಿ ಮಧು ಎಂ. ಬೊಂಗಾಳೆ, ಸಹ ಸಂಚಾಲಕರಾಗಿ ರತ್ನಮ್ಮ ಖಟಾವಕರ್ ಹಾಗೂ ಪದ್ಮಾ ರಾಕುಂಡೆ, ಮಾಧ್ಯಮ ಪ್ರಮುಖರಾಗಿ ಸುಮಂಗಳ ಮಾಳೋದೆ ಹಾಗೂ ಎಂ. ಗೀತಾ ಪಿಸೆ, ಸಾಂಸ್ಕೃತಿಕ ಸಂಯೋಜಕರಾಗಿ ನೇತ್ರಾ ನಂದಿನಿ ಖಟಾವ್ಕರ್ ಹಾಗೂ ಶಕುಂತಲಾ ಪಿಸೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷರಾದ ಎಂ.ಎಸ್. ವಿಠ್ಠಲ್, ಗೌರವಾಧ್ಯಕ್ಷರಾದ ಜ್ಞಾನದೇವ ಬೊಂಗಾಳೆ, ಉಪಾಧ್ಯಕ್ಷ ಮಂಜುನಾಥ ಮಹೇಂದ್ರಕರ್ (ಅವಿನಾಶ್) ಹಾಗೂ ದೈವ ಮಂಡಳಿ ಸದಸ್ಯ ಆನಂದರಾವ್ ರಾಕುಂಡೆ, ರವೀಂದ್ರನಾಥ್ ದಾವಸ್ಕರ್, ಆರ್. ಮಣಿಕಂಠ ಪಿಸೆ, ಪರಶುರಾಮ್ರಾವ್ ಮಹೇಂದ್ರಕರ್ ಹಾಗೂ ಇತರರು ಹಾಜರಿದ್ದರು.