ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂ ಗಳವರ 38ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮವು ಇಂದಿನಿಂದ ಮೂರು ದಿನಗಳ ಕಾಲ ಶ್ರೀ ಡಾ. ಸದ್ಯೋಜಾತ ಸ್ವಾಮೀಜಿ ಹಿರೇಮಠದಲ್ಲಿ ನಡೆಯಲಿದೆ.
ಜೊತೆಗೆ, ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 13ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವೂ ಜರುಗಲಿದೆ ಎಂದು ಪುಣ್ಯಾರಾಧನಾ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸುವರು.
ಇಂದು ಸಂಜೆ 6 ಗಂಟೆಗೆ ಏರ್ಪಾಡಾಗಿರುವ ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ವಹಿಸುವರು.
ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ತಿನ ಮಾಜಿ ಮುಖ್ಯಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರುಗಳಾದ ಯಶವಂತರಾವ್ ಜಾಧವ್, ದೇವರಮನಿ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶ್ರೀ ಗುರುಬಸವ ಮಹಾಂತ ಶಿವಾಚಾರ್ಯ ಸ್ವಾಮೀಜಿ (ತೊಗರ್ಸಿ ಮಳೆಮಠ) ನಾಂದಿ ನುಡಿಗಳನ್ನಾಡುವರು. ನಾಡಿನ ಹಿರಿಯ ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಆರೋಗ್ಯ ಮತ್ತು ಅಧ್ಯಾತ್ಮ ವಿಷಯ ಕುರಿತು ಉಪನ್ಯಾಸ ನೀಡುವರು.
ಗುರು ರಕ್ಷೆ : ಹಿರಿಯ ವೈದ್ಯ ಡಾ. ಎಸ್.ಎಂ. ಎಲಿ, ವರ್ತಕ ರಮಣ್‌ಲಾಲ್ ಪಿ. ಸಂಘವಿ, ಚರ್ಮರೋಗ ತಜ್ಞರಾದ ಡಾ ಕುಸುಗೂರು ಮಠ, ಶ್ವಾಸಕೋಶ ತಜ್ಞ ಡಾ. ಬಿ.ಪಿ. ರಾಜೇಶ್, ಹಿರಿಯ ನೇತ್ರ ತಜ್ಞ ಡಾ. ರವೀಂದ್ರನಾಥ್, ವರ್ತಕರಾದ ಎಸ್. ನಾಗರಾಜ್, ಕೆ. ಬಸವಲಿಂಗಪ್ಪ, ಶ್ರೀಮತಿ ಗೀತಾ ಸಂಕ್ಲೀಪುರ, ಮಧು ಹಾಲೇಶ್.
ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ, ವರ್ತಕ ಬೆಳ್ಳೂಡಿ ಜ್ಯೋತಿ ಪ್ರಕಾಶ್, ಲೆಕ್ಕ ಪರಿಶೋಧಕ ರಾಧೇಶ್ ಜಂಬಿಗಿ, ಸಾಹಿತಿ ಶಿವಯೋಗಿ ಹಿರೇಮಠ ಶಿವಕುಮಾರ್ ಡಿ. ಶೆಟ್ಟರ್, ಜಗದ್ಗುರುಗಳಿಗೆ ಗೌರವಾರ್ಪಣೆ ಮಾಡಲಿದ್ದು, ಟಿ.ಹೆಚ್. ಶಿವಕುಮಾರಸ್ವಾಮಿ ಮತ್ತು ಸಂಗಡಿಗರು ಸಂಗೀತ ಸೇವೆ ಒದಗಿಸುವರು. ಕು. ಭಾರ್ಗವಿ ಮತ್ತು ಸೌಂದರ್ಯ ಭರತ ನಾಟ್ಯ ನಡೆಸಿಕೊಡುವರು.
ರಜತ ಮೂರ್ತಿಗಳ ಮೆರವಣಿಗೆ : ನಾಳೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಹೂವಿನ ಅಲಂಕಾರ, ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ನಂತರ ಲಿಂ. ಉಭಯ ಜಗದ್ಗುರುಗಳ ರಜತ ಮೂರ್ತಿಗಳ ಮೆರವಣಿಗೆಯು ರಾಜಬೀದಿಗಳಲ್ಲಿ ಜರುಗಲಿದೆ.