ದಾವಣಗೆರೆ, ನ.4- ನಗರದ 33ನೇ ವಾರ್ಡಿನಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿ ಅಡಿಯಲ್ಲಿ ಸರಸ್ವತಿ ನಗರ `ಎ’ ಬ್ಲಾಕ್, 2ನೇ ಮೇನ್, 4ನೇ ಕ್ರಾಸ್ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಕಾಮಗಾರಿಯ ಗುದ್ದಲಿ ಪೂಜೆಯನ್ನು ಇಂದು ನೆರವೇರಿಸಲಾಯಿತು. ವಾರ್ಡಿನ ಸದಸ್ಯ ಕೆ.ಎಂ. ವೀರೇಶ್, ಮಾಜಿ ದೂಡ ಅಧ್ಯಕ್ಷ ಕೆ. ಎಂ. ಸುರೇಶ್, ಬಿಜೆಪಿ ಮುಖಂಡರಾದ ಎಲ್.ಎನ್. ಕಲ್ಲೇಶ್, ವಿಶ್ವನಾಥ್, ಇಂಜಿನಿಯರ್ ಕರಿಬಸಪ್ಪ, ಟಿ.ಎಂ. ರೇಣುಕಾರಾಧ್ಯ, ನಾಗಣ್ಣ, ಗಿರಿಜಾ, ಆರ್. ರಾಧಾ ಮತ್ತಿತರರಿದ್ದರು.
December 3, 2024