ನಗರದಲ್ಲಿ ವಿಶ್ವವಿದ್ಯಾಲಯ ಮಟ್ಟದ ಜ್ಯೂಡೋ ಪಂದ್ಯಾವಳಿ

ನಗರದಲ್ಲಿ ವಿಶ್ವವಿದ್ಯಾಲಯ ಮಟ್ಟದ ಜ್ಯೂಡೋ ಪಂದ್ಯಾವಳಿ

ದಾವಣಗೆರೆ, ನ.3- ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕ್ರೀಡಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ 2024-25 ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಜ್ಯೂಡೋ ಪಂದ್ಯಾವಳಿ ಮತ್ತು ವಿವಿ ತಂಡದ ಆಯ್ಕೆ ಪ್ರಕ್ರಿಯೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ಇಂದು ಜರುಗಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಉದ್ಯಮಿ ಸಮರ್ಥ್  ಶಾಮನೂರು ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಜ್ಯೂಡೋ ಕ್ರೀಡೆಯ ವಿವಿಧ ಮಾದರಿ ಪಟ್ಟುಗಳನ್ನು ವೀಕ್ಷಿಸಿದರು.

ದಾವಣಗೆರೆ ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ  ಡಾ. ಸಿ. ಶಂಕರಪ್ಪ ಮಾತನಾಡಿ, `ವಿದ್ಯಾರ್ಥಿಗಳು ಕ್ರೀಡಾ   ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದರು. 

ದಾವಣಗೆರೆ ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ  ಮಹಿಳಾ ಉಪಾಧ್ಯಕ್ಷರಾದ ಡಾ. ಎಂ. ಆರ್. ರೇಖಾ  ಅವರು ಮಾತನಾಡಿ, ನಗರದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕ ಜಿ. ಸಿ. ಅವರು ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜ್ಞಾನಾರ್ಜನೆ ಜೊತೆಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ವಿಕಸನ ಹೊಂದಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಮಾ.ಸ.ಬ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಇಂದೂಧರ ನಿಶಾನಿಮಠ್, ಕಾರ್ಯದರ್ಶಿ ಇ. ಬಸವರಾಜು, ದಾವಣಗೆರೆ ವಿ.ವಿ. ಕ್ರೀಡಾ ಅಧಿಕಾರಿ ಡಾ. ಬಿ. ಎಚ್. ವೀರಪ್ಪ,    ಕ್ರೀಡಾ ಸಂಚಾಲಕ ಎ.ಬಿ. ಡಾ. ವಿಜಯಕುಮಾರ್ ಮಾತನಾಡಿದರು. ಡಾ. ಒ. ಪ್ರವೀಣ್ ಕುಮಾರ್ ಸ್ವಾಗತಿಸಿದರು.

ಕ್ರೀಡಾ ಸದಸ್ಯ ಡಾ. ಎಂ. ಮಂಜಪ್ಪ ನಿರೂಪಿಸಿದರು. ಕು. ಸುನೀತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ರಾಘವೇಂದ್ರ ಆರ್. ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ. ಟಿ. ಆರ್. ರಂಗಸ್ವಾಮಿ, ಪ್ರೊ. ಕೆ. ವೈ. ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!