ಮಲೇಬೆನ್ನೂರು, ನ.4- ಭರ್ತಿಯಾಗಿ ಕೋಡಿ ಬಿದ್ದಿರುವ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಯಲ್ಲಿ 15 ವರ್ಷಗಳ ಬಳಿಕ ಇದೇ ದಿನಾಂಕ 29 ರಂದು ಹಮ್ಮಿಕೊಂಡಿರುವ ತೆಪ್ಪೋತ್ಸವ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಕಂಕಣಧಾರಣೆ, ಧರ್ಮಧ್ವಜ ಸ್ಥಾಪನೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ರಂಗನಾಥ ಸ್ವಾಮಿಗೆ ರುದ್ರಾಭಿಷೇಕ ಪೂಜೆ ಮಾಡಲಾಯಿತು.
ಸುರೇಶ್ ಶಾಸ್ತ್ರಿ, ಗುರುರಾಜಚಾರ್, ಮಂಜುನಾಥಸ್ವಾಮಿ ಅವರುಗಳ ನೇತೃತ್ವದಲ್ಲಿ ಕಂಕಣಧಾರಣೆಯ ಪೂಜಾ ವಿಧಿ, ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿ ದವು. ನಂತರ ತೆಪ್ಪಗಳಲ್ಲಿ ತೆರಳಿ ಕೆರೆಯ ನಡುಗಡ್ಡೆ ಯಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಲಾಯಿತು.
ಶಾಸಕ ಬಿ.ಪಿ. ಹರೀಶ್, ಮುಖಂಡರಾದ
ನಂದಿಗಾವಿ ಶ್ರೀನಿವಾಸ್, ಹನಗವಾಡಿ ವೀರೇಶ್, ಚಂದ್ರಶೇಖರ್ ಪೂಜಾರ್, ಎಸ್.ಜಿ. ಪರಮೇಶ್ವರಪ್ಪ, ಜಿ. ಮಂಜುನಾಥ್ ಪಟೇಲ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.