ಸುವರ್ಣ ಕರ್ನಾಟಕ ವೇದಿಕೆ ಅಧ್ಯಕ್ಷ ಸಂತೋಷ್
ದಾವಣಗೆರೆ, ನ.4- ಕನ್ನಡ ರಾಜ್ಯೋತ್ಸವ ವನ್ನು ಬರೀ ನವೆಂಬರ್ ತಿಂಗಳಲ್ಲಿ ಅಲ್ಲದೇ, ವರ್ಷದ 365 ದಿನವೂ ಕನ್ನಡದ ಹಬ್ಬದಂತೆ ಆಚರಿಸಬೇಕು ಎಂದು ಸುವರ್ಣ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.
ನಗರದ ನಿಟುವಳ್ಳಿ ರಸ್ತೆಯಲ್ಲಿರುವ ಸುವರ್ಣ ಕರ್ನಾಟಕ ವೇದಿಕೆ ಕಚೇರಿ ಯಲ್ಲಿ ಹಮ್ಮಿಕೊಳ್ಳಲಾಗಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಮತ್ತು ಎಲ್ಲರ ಮನೆಯಲ್ಲೂ, ಮನದಲ್ಲೂ ಕನ್ನಡದ ಕಂಪು ನೋಡಬೇಕು. ಈಗಿನ ಶಾಲಾ ಮಕ್ಕಳಲ್ಲಿ ಆಂಗ್ಲ ವ್ಯಾಮೋಹ ಬಹಳವಾಗಿದ್ದು, ಪೋಷಕರು ಕನ್ನಡದ ಬಗ್ಗೆ, ಕನ್ನಡದಲ್ಲಿ ಸಾಧನೆ ಮಾಡಿದ ಕವಿಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಹಾಗಾದಾಗ ಮಾತ್ರ ಕನ್ನಡವನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಸುಂಕಾಪುರ್, ವೇದಿಕೆ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ಭೈರಪ್ಪ, ಜಿಲ್ಲಾ ಉಪಾಧ್ಯಕ್ಷ ರವಿಕುಮಾರ್ ಬಿ.ಆರ್, ಕಣಿವೇಶ್ ಹಾಗೂ ಕಲ್ಪತರು ಶಾಲೆಯ ಶಿಕ್ಷಕಿಯರಾದ ಲಕ್ಷ್ಮಿ, ಮಂಜುಳ, ಸುನೀತ, ಮಮತ, ಸೌಂದರ್ಯ, ಮಾನಸ, ಬಿಂದುಶ್ರೀ, ಲಕ್ಷ್ಮಮ್ಮ, ಯುವ ಘಟಕದ ಉಪಾಧ್ಯಕ್ಷ ಸಂತೋಷ್, ಶರತ್ ಹಾಗೂ ಶಾಲೆಯ ಮಕ್ಕಳು, ವೇದಿಕೆಯ ಸದಸ್ಯರುಗಳು ಭಾಗವಹಿಸಿದ್ದರು.