ಹರಿಹರ, ನ. 4- ಗುತ್ತೂರು ಗ್ರಾಮದ ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯುವ ವೇಳೆ ಅವಘಡ ಸಂಭವಿಸಿ ಇಬ್ಬರು ಮರಣ ಹೊಂದಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕವಿತಾ ಹಾಗೂ ಸಿಪಿಐ ಸುರೇಶ್ ಸರಗಿ ಅವರು ಇಂದು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. ನದಿಯಲ್ಲಿ ಇರುವಂತಹ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಸ್ಥಳೀಯ ಜನರು ನೀರಿನಲ್ಲಿ ಇಳಿಯುವಾಗ ಜಾಗೃತಿ ವಹಿಸಬೇಕು. ಈಜು ಬರದೇ ಇರುವವರು ನದಿಯಲ್ಲಿ ಈಜುವುದನ್ನು ಕೈ ಬಿಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಎಂ. ಎಸ್. ಪ್ರಭು ಮತ್ತು ಇತರರು ಹಾಜರಿದ್ದರು.
ಟ್ರ್ಯಾಕ್ಟರ್ ತೊಳೆಯುವ ವೇಳೆ ಸಂಭವಿಸಿದ ಅವಘಡದಲ್ಲಿ ಸಾವು : ಸ್ಥಳ ಪರಿಶೀಲನೆ
