ನಂದಿ ಸೌಹಾರ್ದ ಸಹಕಾರಿ ಸಂಘದ ಪ್ರಗತಿಗೆ ಮಾಧುಸ್ವಾಮಿ ಮೆಚ್ಚುಗೆ

ನಂದಿ ಸೌಹಾರ್ದ ಸಹಕಾರಿ ಸಂಘದ ಪ್ರಗತಿಗೆ ಮಾಧುಸ್ವಾಮಿ ಮೆಚ್ಚುಗೆ

ಮಲೇಬೆನ್ನೂರು : ಸಂಘದ ವಸತಿ ಗೃಹಗಳ ನಿರ್ಮಾಣಕ್ಕೆ ಭೂಮಿ ಪೂಜೆ

ಮಲೇಬೆನ್ನೂರು, ನ.4- ಇಲ್ಲಿನ ನಂದಿಗುಡಿ ರಸ್ತೆಯಲ್ಲಿರುವ ಶ್ರೀ ನಂದಿ ಸೌಹಾರ್ದ ಸಹಕಾರಿ ಸಂಘದ ಕಟ್ಟಡದ ಹಿಂಭಾಗದಲ್ಲಿ ಸಂಘದ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಂಘವು ಸ್ಥಾಪನೆ ಯಾಗಿ ಯಶಸ್ವೀ 30 ವರ್ಷ ಪೂರೈಸಿರುವುದು ಸಂತೋಷದ ವಿಚಾರವಾಗಿದೆ. ಸಂಘವು ಎರಡು ಶಾಖೆಗಳನ್ನು ಹಾಗೂ ಸ್ವಂತ ಕಟ್ಟಡಗಳನ್ನು ಹೊಂದುವ ಜೊತೆಗೆ ಈ ಭಾಗದ ಎಲ್ಲಾ ಜನರ ನೆಚ್ಚಿನ ಸಂಘವಾಗಿ ಬೆಳೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಹೊಸ ಯೋಜನೆಗಳ ಬಗ್ಗೆಯೂ ಗಮನಹರಿಸಿ ಎಂದು ಆಡಳಿತ ಮಂಡಳಿಗೆ ಕಿವಿಮಾತು ಹೇಳಿದರು.

ಇನ್ನೋರ್ವ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಬಿ.ಪಿ. ಹರೀಶ್‌, ಸಂಘದ ಅಧ್ಯಕ್ಷ ಜಿಗಳಿಯ ಗೌಡ್ರ ಬಸವರಾಜಪ್ಪ, ಉಪಾಧ್ಯಕ್ಷ ಕೊಕ್ಕನೂರಿನ ಕೆ.ಹೆಚ್‌. ಆಂಜನೇಯ ಪಾಟೀಲ್‌, ನಿರ್ದೇಶಕರಾದ ಜಿಗಳಿ ಇಂದೂಧರ್‌, ಎಂ.ವಿ. ನಾಗರಾಜ್‌, ಹಳ್ಳಿಹಾಳ್‌ನ ಹೆಚ್‌.ಟಿ. ಶಾಂತನಗೌಡ್ರು, ಹೆಚ್‌. ವೀರನಗೌಡ್ರು, ಹೆಚ್‌.ಟಿ. ಪರಮೇಶ್ವರಪ್ಪ, ಕೊಕ್ಕನೂರಿನ ಬಿ.ಹೆಚ್‌. ರವಿ, ಟಿ. ರಾಮಚಂದ್ರಪ್ಪ, ಜಿ. ಬೇವಿನಹಳ್ಳಿಯ ಸಂತೋಷ್‌ ಪಾಳ್ಯದ್‌, ಶ್ರೀಮತಿ ಶೋಭಾ ಬಿ.ಜಿ. ಪಾಲಾಕ್ಷಪ್ಪ, ಮಲೇಬೆನ್ನೂರಿನ ಎ. ಆರೀಫ್‌ ಅಲಿ, ಸಂಘದ ಮಾಜಿ ಅಧ್ಯಕ್ಷ ಬಿ. ವೀರಯ್ಯ, ಕೊಕ್ಕನೂರಿನ ಕೆ. ರಾಜು, ಜಿಗಳಿಯ ಜಿ.ಎಂ. ವಿಜಯಕುಮಾರ್‌, ಮಾಜಿ ಉಪಾಧ್ಯಕ್ಷ ಕೆ.ಎನ್‌. ಹಳ್ಳಿಯ ಎಂ. ಪರಮೇಶ್ವರಪ್ಪ, ಮಾಜಿ ನಿರ್ದೇಶಕರಾದ ಕೊಕ್ಕನೂರಿನ ದಾಸರ ಸೋಮಶೇಖರ್‌, ಹೊಸೂರು ರಂಗಪ್ಪ, ಹಿಂಡಸಘಟ್ಟಿಯ ಎಸ್‌. ಮೃತ್ಯುಂಜಯ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್‌, ತಾ.ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್‌, ಮುಖಂಡರಾದ ಮಹಾಂತಯ್ಯ, ಸಿ.ಎಂ. ಗದಿಗೆಯ್ಯ, ವಕೀಲ ನಂದಿತಾವರೆ ತಿಮ್ಮನಗೌಡ, ಸಂಘದ ಕಾರ್ಯದರ್ಶಿ ಹೆಚ್‌.ಎಂ. ಬಸವರಾಜ್‌ ಸೇರಿದಂತೆ ಸಂಘದ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಭಾಗವಹಿಸಿದ್ದರು.

error: Content is protected !!