ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿಯಲ್ಲಿ ಅಗ್ರಸ್ಥಾನದಲ್ಲಿದೆ

ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿಯಲ್ಲಿ ಅಗ್ರಸ್ಥಾನದಲ್ಲಿದೆ

ಕೆ.ಎನ್.ಹಳ್ಳಿಯಲ್ಲಿ ಶಾಸಕ ಹರೀಶ್

ಮಲೇಬೆನ್ನೂರು, ನ.5- ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿಯಲ್ಲಿ ಅಗ್ರಸ್ಥಾನದಲ್ಲಿದ್ದು, 8 ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಕಡರನಾಯಕನಹಳ್ಳಿ ಗ್ರಾಮದಲ್ಲಿ ಗಜ ಸರ್ಕಲ್ ಬಾಯ್ಸ್ ನಿನ್ನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷಕರ. ಗ್ರಾಮೀಣ ಪ್ರದೇಶದ ಕುರಿಗಾಹಿ ಹನುಮಂತ ನಾಡಿನಲ್ಲೇ ಹೆಸರು ಮಾಡಿರುವುದು ಇಂತಹ ವೇದಿಕೆಗಳ ಸಹಕಾರದಿಂದ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಗಗನ, ಗಿಲ್ಲಿ ಅವರು ಜಿ ಕನ್ನಡದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಭಾಷೆ ಸಾಂಸ್ಕೃತಿಕವಾಗಿ ಮೇರು ಪಂಕ್ತಿಯಲ್ಲಿದೆ ಎಂದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಜಿ.ಮಂಜುನಾಥ್, ಮಾಜಿ ಸೈನಿಕ ಗೋಪಾಲ ಶೆಟ್ಟಿ ಮಾತನಾಡಿದರು. ಚಿಗುರು ಕಾನ್ವೆಂಟ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಹರಿಹರ ತಾ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಸ್ತೂರಮ್ಮ ನಾಗೇಂದ್ರಪ್ಪ ಮತ್ತು ಸೈನಿಕರಾದ ಶಾಂತಕುಮಾರ್, ಹೆಚ್.ಆರ್.ಈಶ್ವರ್, ಕಿರಣ್ ಕುಮಾರ್, ಸುನೀಲ್ ಕುಮಾರ್, ಮಧು ಇವರನ್ನು ಈ ವೇಳೆ ಸನ್ಮಾನಿಸಲಾಯಿತು. 

ಗ್ರಾ.ಪಂ ಸದಸ್ಯ ಜಿ.ಲೋಕೇಶ್, ಮಾಜಿ ಸದಸ್ಯ ಟಿ.ಅಶೋಕ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಅನಂತರಾವ್, ಮಾಜಿ ಅಧ್ಯಕ್ಷ ಚಕ್ಕಡಿ ಚಂದ್ರಪ್ಪ, ಪೋಸ್ಟ್ ವಸಂತಪ್ಪ ಮತ್ತು ಗಜ ಸರ್ಕಲ್ ವ್ಯಾಪ್ತಿಯ ಎಲ್ಲಾ ಮುಖಂಡರು, ಯುವಕರು ಭಾಗವಹಿಸಿದ್ದರು.

error: Content is protected !!