ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ವಾರ್ಷಿಕ ಮಹಾಸಭೆ

ಜಿಲ್ಲಾ ನ್ಯಾಯಾಂಗ ಇಲಾಖಾ  ನೌಕರರ ಸಂಘದ ವಾರ್ಷಿಕ ಮಹಾಸಭೆ

ದಾವಣಗೆರೆ, ನ. 5 –  ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ವಿವಿಧೋದ್ಧೇಶ ಸಹಕಾರ ಸಂಘದ 14ನೇ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಎನ್.ಜಿ. ಶಂಕರ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾ ಗಿತ್ತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್,  ನ್ಯಾಯಾಂಗ ಇಲಾ ಖೆಯ ನಿವೃತ್ತರಾದ ಗೋವಿಂದಪ್ಪ, ಓಂಕಾರಪ್ಪ, ರಹಮತ್‌ವುಲ್ಲಾ, ದಾಸಪ್ಪ ಅವರನ್ನು ಸನ್ಮಾನಿಸ ಲಾಯಿತು. ಉಪಾಧ್ಯಕ್ಷ ಜಿ.ಆರ್. ಶೇಖರಪ್ಪ, ಗೌರವ ಕಾರ್ಯದರ್ಶಿ ಎನ್.ಟಿ. ಕರಿಸಿದ್ದಪ್ಪ, ನಿರ್ದೇಶಕ ವೈ. ಹನುಮಂತಪ್ಪ, ಪಿ.ಹೆಚ್. ಮಂಜುನಾಥ್, ಎನ್. ಮಾರುತಿ, ಎ.ಪಿ. ಜಗನ್ನಾಥ್, ಜಿ.ಎಸ್. ಪವಿತ್ರ, ಕೆ. ಕೊಟ್ರೇಶ್, ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಶ್ರೀಧರ ನಾಯಕ, ಶಿವಬಸು ಆರ್. ಬಾಗೇವಾಡಿ, ಆರ್. ಹರೀಶ್, ಶಶಿಧರ ಎಂ. ಶಾಂತಗಿರಿ, ಎಂ.ಹೆಚ್. ಸುಭಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!