ಮೂಷ್ಟೂರು ಗ್ರಾಮದಲ್ಲಿ ಇಂದಿನಿಂದ ಆಂಜನೇಯ ದೇವರ ಮೂರ್ತಿ ಪ್ರತಿಷ್ಠಾಪನೆ

ಮೂಷ್ಟೂರು ಗ್ರಾಮದಲ್ಲಿ ಇಂದಿನಿಂದ ಆಂಜನೇಯ ದೇವರ ಮೂರ್ತಿ ಪ್ರತಿಷ್ಠಾಪನೆ

ರಾಣೇಬೆನ್ನೂರು  ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಇಂದಿನಿಂದ ಇದೇ ದಿನಾಂಕ 9 ರವರೆಗೆ ಶ್ರೀ ಆಂಜನೇಯ ಸ್ವಾಮಿಯ ನೂತನ ದೇವಸ್ಥಾನದ ಉದ್ಘಾಟನೆ ಮತ್ತು ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭರಮ ದೇವರ ಕಳಸಾರೋಹಣ ಕಾರ್ಯಕ್ರಮಗಳು ಜರುಗಲಿವೆ.

ಇಂದು ಮಧ್ಯಾಹ್ನ 2 ಗಂಟೆಗೆ  ನಗರದ ಕೆಇಬಿ ಗಣೇಶ ದೇವಸ್ಥಾನದ ಬಳಿಯಿಂದ ಆಂಜನೇಯ ಸ್ವಾಮಿಯ ಶಿಲಾಮೂರ್ತಿಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಹಾಯ್ದು ಮುಷ್ಟೂರ್ ಗ್ರಾಮವನ್ನು ತಲುಪಲಿದೆ. 

ನಾಳೆ ಗುರುವಾರ ಬೆಳಗ್ಗೆ 7 ಗಂಟೆಗೆ ಕರಗಲ್ಲು ಸ್ಥಾಪನೆ, ಸಂಜೆ ಶಿಲಾಮೂರ್ತಿಯ ಧಾನ್ಯದಿವಾಸ ನಡೆಯಲಿದೆ. ನ. 8ರಂದು ಮೂರ್ತಿಗೆ ಮಂಗಳ, ಬೆಳ್ಳಿ ಬಂಗಾರ, ಹವಳ, ಮುತ್ತು, ರತ್ನಗಳು ಧನದೊಂದಿಗೆ ಗದ್ದುಗೆ ಸ್ಥಾಪನೆ ಮಾಡಲಾಗುವುದು.

ಅಂಗನ್ಯಾಸ ಹವನ್ಯಾಸ, ಮಹಾನ್ಯಾಸ, ತತ್ವದ್ವನ್ಯಾಸ, ರುದ್ರಾಭಿಷೇಕ,  ಹೋಮ ನಡೆಯಲಿದೆ. ಅನಂತರ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿಯ  ಪ್ರತಿಷ್ಠಾಪನೆ ಜರುಗುವುದು. ಜೊತೆಗೆ ಭರಮದೇವರ ಕಳಸಾರೋಹಣ  ನಡೆಯುವುದು. 

ಅನಂತರ ಮಧ್ಯಾಹ್ನ  12 ಗಂಟೆಗೆ ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭವು ಜರುಗಲಿದೆ.  ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಗೌಡ ಸಿ ಪಾಟೀಲ್ ಅಧ್ಯಕ್ಷತೆ ವಹಿಸುವರು. 

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಸಚಿವ ಆರ್. ಶಂಕರ್ ಸೇರಿದಂತೆ ಮಂಜುನಾಥ್ ಓಲೆಕಾರ್, ಎಸ್.ಎಸ್. ರಾಮಲಿಂಗಣ್ಣನವರ, ಸಂತೋಷ್ ಕುಮಾರ್ ಪಾಟೀಲ, ಪರಮೇಶಪ್ಪ ಗೂಳಣ್ಣನವರ, ಮಂಜುನಾಥ ಹಲ್ಡಲ್ಡರ,  ರಾಜುಗೌಡ ಪಾಟೀಲ್, ಬಸಮ್ಮ ತಳವಾರ, ಚಂದ್ರವ್ವ ಹಿರೇಮರದ ಮತ್ತಿತರರು ಆಗಮಿಸುವರು. ಆನಂತರ ಅನ್ನ ಸಂತರ್ಪಣೆ ನಡೆಯುವುದು.

ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ 7 ಘಂಟೆಯಿಂದ ಪುಟ್ಟರಾಜ ಗವಾಯಿಗಳವರ ಶಿಷ್ಯ ಬಸವ ಶಾಸ್ತ್ರಿ ಇರಕಲ್ ರವರಿಂದ ಕೀರ್ತನ ಕಾರ್ಯಕ್ರಮವು ಜರುಗಲಿದೆ.

error: Content is protected !!