ಅಂಗ ವೈಕಲ್ಯತೆ ಪಾಪವಲ್ಲ: ಮಹಾವೀರ್ ಮ.ಕರೆಣ್ಣವರ

ಅಂಗ ವೈಕಲ್ಯತೆ ಪಾಪವಲ್ಲ: ಮಹಾವೀರ್ ಮ.ಕರೆಣ್ಣವರ

ದಾವಣಗೆರೆ, ನ.3- ಅಂಗವೈಕಲ್ಯ ಪಾಪವಲ್ಲ, ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಅವಕಾಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರಣ್ಣನವರ  ಹೇಳಿದರು.

ಬುಧುವಾರ ನಗರದ ಸಿಆರ್‍ಸಿ ಆವರಣದಲ್ಲಿ `ರಾಷ್ಟ್ರದ ಏಳಿಗೆಗಾಗಿ ಸಮಗ್ರತೆಯ ಸಂಸ್ಕೃತಿ’ ಎಂಬ ವಿಷಯದೊಂದಿಗೆ ಜಾಗೃತಿ ಸಪ್ತಾಹದ ಅಂಗವಾಗಿ `ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತಾನಾಡಿದರು. 

`ಭ್ರಷ್ಟಾಚಾರ ಮುಕ್ತ ಭಾರತ’, ಆರ್‍ಪಿಡಬ್ಲ್ಯೂಡಿ ಕಾಯ್ದೆ, ಆರ್‍ಟಿಐ ಕಾಯ್ದೆ, ವಿಕಲಚೇತನರ ಹಕ್ಕುಗಳು ಮತ್ತು ಭಾರತ ಸರ್ಕಾರವು ಒದಗಿಸಿರುವ ನಿಬಂಧನೆಗಳು, ಯೋಜನೆಗಳ ಕುರಿತು  ಅರಿವು ಮೂಡಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ವಿಕಲಾಂಗ ವ್ಯಕ್ತಿಗಳಿಗೆ ಒದಗಿಸುವ ಸಿಆರ್‍ಸಿ ಸೇವೆಗಳನ್ನು ನೋಡುವ ಮೂಲಕ ನಾನು ತುಂಬಾ ಸಂತೋಷಗೊಂಡಿದ್ದೇನೆ ಎಂದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರ, ಸಿಆರ್‍ಸಿ ನಿರ್ದೇಶಕರಾದ ಮೀನಾಕ್ಷಿ ಮಾತಾನಾಡಿದರು.  ಸಹಾಯಕ ಸಸ್ಯ ಆರೈಕೆದಾರರ ವೃತ್ತಿಪರ ತರಬೇತಿ ಕೋರ್ಸ್ ಪೂರ್ಣಗೊಳಿಸಿದ ಸಿಆರ್‍ಸಿ ವಿದ್ಯಾರ್ಥಿಗಳಿಗೆ  ಕೋರ್ಸ್ ಪೂರ್ಣ ಗೊಳಿಸಿದ ಪ್ರಮಾಣಪತ್ರಗಳನ್ನು ವಿತರಿಸಿದರು.

error: Content is protected !!