ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂ ಗಳವರ 38ನೇ ವರ್ಷದ ಸ್ಮರಣೋತ್ಸವ ಮತ್ತು ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 13ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ಶ್ರೀ ಡಾ. ಸದ್ಯೋಜಾತ ಸ್ವಾಮೀಜಿ ಹಿರೇಮಠದಲ್ಲಿ ನಡೆಯುತ್ತಿದ್ದು, ಇಂದಿನ ಕಾರ್ಯಕ್ರಮದ ವಿವರ :
ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸುವರು.
ಇಂದು ಸಂಜೆ 6 ಗಂಟೆಗೆ ನಡೆಯುವ ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ (ತೊಗರ್ಸಿ) ಮತ್ತು ಶ್ರೀ ಡಾ. ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ (ಬಸವನ ಬಾಗೇವಾಡಿ) ಸಮ್ಮುಖ ವಹಿಸುವರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎ.ಹೆಚ್. ಕುಬೇರಪ್ಪ, ಉದ್ಯಮಿ ಹನುಮಂತಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ (ದಿಂಡದಹಳ್ಳಿ ಮಠ) ನಾಂದಿ ನುಡಿಗಳನ್ನಾಡಲಿದ್ದು, ಬಳ್ಳಾರಿಯ ಚಿಕ್ಕ್ಯಾಟೆ ಮಠದ ವೀರಭದ್ರಯ್ಯ ಅವರು ಸಮಾಜ ಮತ್ತು ಪಂಚಪೀಠಗಳ ಮಹತ್ವ ಕುರಿತಂತೆ ಉಪನ್ಯಾಸ ನೀಡುವರು.
ಗುರು ರಕ್ಷೆ : ಸಕ್ಕರೆ ಕಾಯಿಲೆ ತಜ್ಞ ಡಾ. ವಿನಯ್‌ಕುಮಾರ್ ಸ್ವಾಮಿ, ವರ್ತಕ ಎನ್.ಕೆ. ಚನ್ನವೀರಪ್ಪ, ಶ್ರೀಮತಿ ಸಾವಿತ್ರಮ್ಮ ಮತ್ತು ವಿ. ಹನಿಮಂತ ಶ್ರೇಷ್ಠಿ, ಶ್ರೀಮತಿ ಬಸಮ್ಮ ಕೆ.ಜಿ. ಹಾಲಪ್ಪ (ಧೂಳೆಹೊಳೆ), ಶ್ರೀಮತಿ ಶ್ಯಾಮಲ ಮತ್ತು ಎನ್.ಎಂ. ಹಾಲಸ್ವಾಮಿ, ಶ್ರೀಮತಿ ಶೋಭಾ ಮತ್ತು ಎ.ಎಂ. ಪ್ರಕಾಶ್ (ಬಸವೇಶ್ವರ ಮುದ್ರಣ), ಟಿ.ಎನ್. ನಾಗರಾಜ್ (ದೀಟೂರು).
ಎನ್.ಎಂ. ತಿಪ್ಪೇಸ್ವಾಮಿ, ಎಸ್.ಎಂ. ರುದ್ರಮುನಿ, ಶಿವಾನಂದ ಭಾನುವಳ್ಳಿ (ಹರಿಹರ), ನಿರಂಜನ ದೇವರಮನೆ (ಚಿತ್ರದುರ್ಗ), ಎನ್.ಹೆಚ್. ಪಟೇಲ್ (ಹರಿಹರ), ಪಿ.ಜಿ. ರಾಜಶೇಖರಯ್ಯ ಅವರುಗಳು ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಮಾಡಲಿದ್ದು, ವಿಧೂಷಿ ಸಂಗೀತ ರಾಘವೇಂದ್ರ ವೆರ್ಣೇಕರ್ ಸಂಗೀತ ಸೇವೆ ಒದಗಿಸುವರು.
ರಜತ ಮೂರ್ತಿಗಳ ಮೆರವಣಿಗೆ : ಇಂದು ಬೆಳಿಗ್ಗೆ 8 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಹೂವಿನ ಅಲಂಕಾರ, ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ನಂತರ ಲಿಂ. ಉಭಯ ಜಗದ್ಗುರುಗಳ ರಜತ ಮೂರ್ತಿಗಳ ಮೆರವಣಿಗೆಯು ರಾಜಬೀದಿಗಳಲ್ಲಿ ಜರುಗಲಿದೆ.