ದಾವಣಗೆರೆ, ನ.5- ಸರಗಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ 2.10 ಲಕ್ಷ ರೂ. ಬೆಲೆಯ 28 ಗ್ರಾಂ ಬಂಗಾರದ ಸರಗಳನ್ನು ವಶ ಪಡಿಸಿಕೊಂಡಿದ್ದಾರೆ. ಹರಿಹರ ತಾಲ್ಲೂಕು ಗುಳೇದನಹಳ್ಳಿ ಹನುಮಂತ ಬಂಧಿತ ಆರೋಪಿ.
ಕಳೆದ ಅಕ್ಟೋಬರ್ 29ರಂದು ರಾತ್ರಿ 8.30ರ ವೇಳೆ ಮಲೇಬೆನ್ನೂರು ಠಾಣಾ ವ್ಯಾಪ್ತಿಯ ನೆಹರು ನಗರ ಕ್ಯಾಂಪ್ನ ಲಕ್ಷ್ಮಿ ಎಂಬುವರ ಕೊರಳಲ್ಲಿದ್ದ ಸರವನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2023ನೇ ಸಾಲಿನ ಕಳ್ಳತನ ಪ್ರಕರಣವೂ ಪತ್ತೆಯಾಗಿದೆ.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆ ಪಿ.ಎಸ್.ಐ (ಕಾ.ಸು) ಪ್ರಭು ಡಿ ಕೆಳಗಿನ ಮನಿ, ಪಿ.ಎಸ್.ಐ (ತನಿಖೆ) ಶ್ರೀ ಚಿದಾನಂದಪ್ಪ, ಎ.ಎಸ್.ಐ ಶ್ರೀನಿವಾಸ ಡಿ.ಟಿ, ಮಹಮ್ಮದ್ ಇಲಿಯಾಜ್, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ಪ್ರವೀಣ್ಪಾಟೀಲ್, ಫೈರೋಜ್, ವೆಂಕಟರಮಣ, ಅಮ್ಜದ್, ಪ್ರದೀಪ್, ಲಕ್ಷ್ಮಣ, ವಿರೇಶ್, ಶಿವಕುಮಾರ್, ರಾಜಪ್ಪ, ಮುರುಳಿ ದರ ರವರ ತಂಡವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.