ಎಲೆಬೇತೂರಿನ ತರಳಬಾಳು ಶಾಲೆಯಲ್ಲಿ ರಾಜ್ಯೋತ್ಸವ

ಎಲೆಬೇತೂರಿನ ತರಳಬಾಳು ಶಾಲೆಯಲ್ಲಿ ರಾಜ್ಯೋತ್ಸವ

ದಾವಣಗೆೇರೆ, ನ.5- ಎಲೆಬೇತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು ಬಾಳೆಕಂಬ, ಮಾವಿನ ತೋರಣಗಳಿಂದ ಅಲಂಕರಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಬಣ್ಣ ಬಣ್ಣದ ಉಡುಪುಗಳು ಧರಿಸಿದ್ದು ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿತ್ತು. 

ಕಾರ್ಯಕ್ರಮಕ್ಕೆ ಬಂದ ಅತಿಥಿಗಳ, ಶಿಕ್ಷಕರುಗಳ ಕೊರಳಲ್ಲಿ ಹಳದಿ ಕೆಂಪು ಕನ್ನಡದ ಶಾಲುಗಳು ರಾರಾಜಿಸುತ್ತಿದ್ದವು. ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಹೆಚ್. ಬಸವರಾಜಪ್ಪ  ಧ್ವಜಾರೋಹಣ ನೆರವೇರಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ದಾವಣಗೆರೆ ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು, ಅಧ್ಯಾಪಕ ಎಸ್.ಆರ್. ನಾಗರಾಜ್ ಮತ್ತು ಹೆಚ್.ಎಸ್ ದ್ಯಾಮೇಶ್ ಹಾಗೂ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ, ವೈಭವ, ಮಹತ್ವ, ಪ್ರಸ್ತುತ ಸವಾಲುಗಳ ಕುರಿತು ಮಾತನಾಡಿದರು. 

ಮುಖ್ಯೋಪಾಧ್ಯಾಯಿನಿ ಎಂ.ಬಿ. ಪ್ರೇಮಾ ಸ್ವಾಗತಿಸಿದರು. ಅಧ್ಯಾಪಕರಾದ ಉಷಾ ಕನ್ನಡ ಗೀತೆಗಳನ್ನು ಹಾಡಿದರು. 

ವೇದಿಕೆಯ ಮೇಲೆ ತರಳಬಾಳು ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಅಧ್ಯಾಪಕಿ ಅನಿತಾ ಮತ್ತು ರವಿಕುಮಾರ್ ಉಪಸ್ಥಿತರಿದ್ದರು. ಅಧ್ಯಾಪಕ ಷಣ್ಮುಖಪ್ಪ ಕಾರ್ಯಕ್ರಮ ನಿರ್ವಹಿಸಿದರು. 

error: Content is protected !!