ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

 ಬೆಂಗಳೂರು, ನ. 3 – ‘ಮಠ’ ಚಿತ್ರದ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಹಾಗೂ ನಟ ಗುರುಪ್ರಸಾದ್ ಅವರು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

1972ರಲ್ಲಿ ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್ ರಾಮಚಂದ್ರ ಶರ್ಮಾ, 2006ರಲ್ಲಿ ಬಿಡುಗಡೆಯಾದ ‘ಮಠ’ ಚಿತ್ರದ ನಿರ್ದೇಶಕರಾಗಿ ತಮ್ಮ ಚಿತ್ರಯಾನ ಆರಂಭಿಸಿದ್ದರು.

2009ರಲ್ಲಿ ಬಿಡುಗಡೆಯಾದ ‘ಎದ್ದೇಳು ಮಂಜುನಾಥ’ ಚಿತ್ರ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತ್ತು. ಆದರೆ, ನಂತರದ ಚಿತ್ರಗಳು ಅವರಿಗೆ ಅಷ್ಟಾಗಿ ಯಶಸ್ಸು ನೀಡಲಿಲ್ಲ. 

ಚಿತ್ರ ನಟರಾಗಿ ಹಾಗೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದರು.

ಮೊದಲನೇ ಪತ್ನಿಯಿಂದ ದೂರವಾಗಿದ್ದ ಅವರು, ಎರಡನೇ ಮದುವೆಯಾಗಿದ್ದರು. ಆದರೂ, ಪ್ರತ್ಯೇಕವಾಗಿ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ಇದ್ದರು. ಅವರಿದ್ದ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬಂದ ನಂತರ, ನೆರೆ ಹೊರೆಯವರು ಪೊಲೀಸರಿಗೆ ದೂರು ನೀಡಿದರು. ನಂತರ ಬಾಗಿಲು ತೆರೆದಾಗ ಅವರು ನೇಣು ಹಾಕಿಕೊಂಡಿದ್ದುದು ಕಂಡು ಬಂದಿದೆ.

ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಗುರುಪ್ರಸಾದ್ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

error: Content is protected !!