ಮಲೇಬೆನ್ನೂರು, ನ.3- ಪಟ್ಟಣದ ವಿವಿಧೆಡೆ 69ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮಿ ಪೂಜೆಗಳನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಪುರಸಭೆ ಕಚೇರಿ ಮತ್ತು ಮುಖ್ಯ ವೃತ್ತದಲ್ಲಿ ಪುರಸಭೆಯ ಪ್ರಭಾರಿ ಅಧ್ಯಕ್ಷೆ ಶ್ರೀಮತಿ ನಪ್ಸೀಯಾ ಬಾನು ಚಮನ್ ಷಾ ಅವರು ಧ್ವಜಾರೋಹಣ ನೆರವೇರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಮಂಜುನಾಥ್, ಮುಖ್ಯಾಧಿಕಾರಿ ಭಜಕ್ಕನವರ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಕೆ.ಜಿ.ಲೋಕೇಶ್, ಖಲೀಲ್, ಭೋವಿ ಶಿವು, ಸಾಬೀರ್ ಅಲಿ, ನಯಾಜ್, ಬೆಣ್ಣೆಹಳ್ಳಿ ಸಿದ್ದೇಶ್, ದಾದಾಪೀರ್, ಷಾ ಅಬ್ರಾರ್, ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್, ಶ್ರೀಮತಿ ಸುಧಾ ಪಿ.ಆರ್.ರಾಜು, ಶ್ರೀಮತಿ ಅಕ್ಕಮ್ಮ ಬಿ.ಸುರೇಶ್, ಶ್ರೀಮತಿ ಸುಲೋಚನಮ್ಮ ಓ.ಜಿ.ಕುಮಾರ್, ಜಿಗಳೇರ ಹಾಲೇಶಪ್ಪ, ಎಂ.ಬಿ.ರುಸ್ತುಂ, ಭೋವಿ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ನಾಡ ಕಚೇರಿ ಆವರಣದಲ್ಲಿ ಉಪತಹಶೀಲ್ದಾರ್ ಆರ್.ರವಿ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು. ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಶ್ರೀಧರ್, ಕೊಟ್ರೇಶ್, ಬೋರಯ್ಯ, ಶರೀಫ್, ಸೌಮ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಜಿಗಳಿ ವೃತ್ತದಲ್ಲಿ ಕರವೇ ವತಿಯಿಂದ ಕನ್ನಡ ಧ್ವಜ ಸ್ತಂಭ ಸ್ಥಾಪಿಸಿ, ಕನ್ನಡ ಧ್ವಜಾರೋಹಣ ಮಾಡಲಾಯಿತು. ಕರವೇ ಅಧ್ಯಕ್ಷ ಎಳೆಹೊಳೆ ಕುಮಾರ್, ಎಂ.ಕೆ.ಗಜೇಂದ್ರ ಸ್ವಾಮಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಮಹಮದ್ ಯುನೂಸ್ ಧ್ವಜಾರೋಹಣ ಮಾಡಿದರು. ಸಂಘದ ನಿರ್ದೇಶಕರಾದ ಜಿ.ಮಂಜುನಾಥ್ ಪಟೇಲ್, ಪಿ.ಆರ್.ಕುಮಾರ್, ಕೆ.ಪಿ.ಗಂಗಾಧರ್, ಸಿ.ಅಬ್ದುಲ್ ಹಾದಿ, ಸಿಇಓ ಸಿದ್ದಪ್ಪ, ಶಿಕ್ಷಕರಾದ ಹನುಮಗೌಡ, ಗೋವಿಂದಪ್ಪ ಪಾಲ್ಗೊಂಡಿದ್ದರು.
ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಶಾಲೆಯಲ್ಲಿ ಲಯನ್ಸ್ ಮಾಜಿ ಗವರ್ನರ್ ಡಾ. ಟಿ.ಬಸವರಾಜ್ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಹಾಗೂ ಇತರರು ಭಾಗವಹಿಸಿದ್ದರು.
ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆ, ಮಾಲತೇಶ್ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬೀರಲಿಂಗೇಶ್ವರ ವಿದ್ಯಾಸಂಸ್ಥೆ, ಸರ್ಕಾರಿ ಉರ್ದು ಪ್ರೌಢಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನೀರಾವರಿ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಇನ್ನೂ ಅನೇಕ ಶಾಲೆಗಳಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.