ನಗರದಲ್ಲಿ ಇಂದಿನಿಂದ ಶ್ರೀಶೈಲ ಪೀಠದ ಉಭಯ ಜಗದ್ಗುರುಗಳ ಸ್ಮರಣೋತ್ಸವ

ನಗರದಲ್ಲಿ ಇಂದಿನಿಂದ ಶ್ರೀಶೈಲ ಪೀಠದ ಉಭಯ ಜಗದ್ಗುರುಗಳ ಸ್ಮರಣೋತ್ಸವ

ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 38ನೇ ವರ್ಷದ  ಸ್ಮರಣೋತ್ಸವ ಕಾರ್ಯಕ್ರಮವು ಇಂದಿನಿಂದ ಮೂರು ದಿನಗಳ ಕಾಲ ಶ್ರೀ ಡಾ. ಸದ್ಯೋಜಾತ ಸ್ವಾಮೀಜಿ  ಹಿರೇಮಠದಲ್ಲಿ ನಡೆಯಲಿದೆ.

ಜೊತೆಗೆ, ಶ್ರೀಶೈಲ ಪೀಠದ ಹಿರಿಯ ಜಗದ್ಗುರು ಲಿಂ. ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 13ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವೂ ಜರುಗಲಿದೆ ಎಂದು ಪುಣ್ಯಾರಾಧನಾ ಸೇವಾ ಸಮಿತಿ ಕಾರ್ಯಾಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಉಜ್ಜಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಮತ್ತು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸುವರು.

ಇಂದು ಸಂಜೆ 6 ಗಂಟೆಗೆ ಭಾವೈಕ್ಯ ಜನಜಾಗೃತಿ ಧರ್ಮ ಸಮಾರಂಭ ನಡೆಯಲಿದ್ದು, ರಾಮಘಟ್ಟದ ಶ್ರೀ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮುಷ್ಟೂರು ಓಂಕಾರ ಉಚ್ಚನಾಗಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಎಡೆಯೂರು ಬಾಳೇ ಹೊನ್ನೂರು ಶಾಖಾಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನಾಂದಿ ನುಡಿಗಳನ್ನಾಡುವರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ನಗರಪಾಲಿಕೆ ಸದಸ್ಯ ಎ. ನಾಗರಾಜ್ ಮುಖ್ಯ ಅತಿಥಿಗಳಾಗಿದ್ದಾರೆ.

ವೀರಶೈವ ಧರ್ಮವನ್ನು ಪೋಷಿಸಿದ ರಾಜ ಮನೆತನಗಳು ವಿಷಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಸಿ.ಜಿ. ಮಠಪತಿ (ಹಿಪ್ಪರಗಿ-ಬೆಳಗಾವಿ) ಉಪನ್ಯಾಸ ನೀಡುವರು. ಸಾಹಿತ್ಯ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತ ಬಾ.ಮ. ಬಸವರಾಜಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.

ಗುರುರಕ್ಷೆ : ಶ್ರೀಮತಿ ಸೌಭಾಗ್ಯ ಬೀಳಗಿಮಠ, ಎಸ್ಪಿ ಉಮಾ ಪ್ರಶಾಂತ್, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಮಲ್ಲಮ್ಮ ಚೌಬೆ, ನಗರಪಾಲಿಕೆ ಸಹಾಯಕ ಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಬೆಳ್ಳೂಡಿ ಶಿವಕುಮಾರ್, ವಿ.ಆರ್. ಮಠ (ಸಾಲಕಟ್ಟೆ), ಹೆಚ್.ಎಂ. ನಾಗರಾಜ್, ವಿಜಯಕುಮಾರ್ ಅಣಬೂರು ಮಠ, ಯಲವಟ್ಟಿ ಹಾಲೇಶ್.

ಕಾರ್ಯಕ್ರಮದ ವಿವರಕ್ಕಾಗಿ ಶ್ರೀಶೈಲ ಮಠದ ವ್ಯವಸ್ಥಾಪಕರಾದ ಎಂ. ಬನ್ನಯ್ಯ (99869-22077) ಅವರನ್ನು ಸಂಪರ್ಕಿಸಬಹುದು.

error: Content is protected !!