ಮಲೇಬೆನ್ನೂರು, ಅ.31- ಪಟ್ಟಣದ ನಾಡಕಚೇರಿಯಲ್ಲಿ ಸರ್ವರ್ ಹಾಗೂ ಯುಪಿಎಸ್ ಸಮಸ್ಯೆಯಿಂದಾಗಿ ದಿನವಿಡೀ ಕಾದು ಕುಳಿತರೂ ಆಗುತ್ತಿಲ್ಲ ಎಂದು ಹೋಬಳಿ ವ್ಯಾಪ್ತಿಯ ಜನತೆ ಬುಧವಾರ ಬೇಸರ ವ್ಯಕ್ತಪಡಿಸಿ ಧರಣಿ ನಡೆಸಲು ಮುಂದಾದ ಘಟನೆ ನಡೆಯಿತು.
ರೈತರ ಸಮಸ್ಯೆ ಆಲಿಸಿದ ಉಪತಹಶೀಲ್ದಾರ್ ಆರ್.ರವಿ ಯುಪಿಎಸ್ ದುರಸ್ತಿ ಮಾಡಿದ್ದರೂ ಆಗಾಗ ಕೈ ಕೊಡುತ್ತಿದೆ.
ಸರ್ವರ್ ಸಮಸ್ಯೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದ ಇಲಾಖೆಯೊಟ್ಟಿಗೆ ಸಹಕರಿಸಿ ಎಂದರು.
ಉಪಸ್ಥಿತರಲ್ಲಿ ಮನವಿ ಮಾಡಿ ಧರಣಿ ನಡೆಸದಂತೆ ತಡೆದು ಮನವೊಲಿಸುವಲ್ಲಿ ಯಶಸ್ವಿಯಾದರು.
ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವೆ ಇನ್ನಿತರೆ ಕೆಲಸ ಆಗುತ್ತಿಲ್ಲ, ಇನ್ನೊಂದೆಡೆ ಕಚೇರಿ ಯುಪಿಎಸ್ ಕೆಟ್ಟಿದ್ದು, ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂದು ನಿಟ್ಟೂರಿನ ರೈತ ಬಿ.ಜಿ.ಧನಂಜಯ ಹಾಗೂ ಹಿರೇಹಾಲಿವಾಣದ ಗೊಂದಿ ರೇವಣಸಿದ್ದಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕೆಲಸ ಬದುಕು ಬಿಟ್ಟು ಬಂದು ದಿನವಿಡೀ ಕಾದರೂ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾಡಳಿತ ಸಮಸ್ಯೆ ಪರಿಹರಿಸಿ ಎಂದು ಪಟ್ಟು ಹಿಡಿದು ಕುಳಿತಿದ್ದರು.
ಸಮೀಪದ ಭಾನುವಳ್ಳಿಯಲ್ಲಿ ಇನ್ನೊಂದು ಅಟಲ್ ಸೇವಾ ಕೇಂದ್ರ ತೆರೆಯುವಂತೆ ಇಂಗಳಗೊಂದಿ ಮಹಾಂತೇಶ್ ಜಿಲ್ಲಾಡಳಿತಕ್ಕೆ ಕೋರಿದರು.
ರೈತರಾದ ವಾಸೀಮ್ ಸಾಬ್, ನಾಗರಾಜ್, ಬೂದಿಹಾಳ್ ಶಿವಮೂರ್ತಿ, ಶಿವಯ್ಯ ಎಳೆಹೊಳೆ, ಇಂಗಳಗೊಂದಿ ಹನುಮಂತು, ಮಹಾಂತೇಶ್, ಜಗದೀಶ್ ಇದ್ದರು.
ಸದರಿ ಸಮಸ್ಯೆ ಹಲವಾರು ದಿನಗಳಿಂದ ಹೆಚ್ಚಾಗಿದೆ. ದಿನವಿಡೀ ಕುಳಿತು ಕೆಲಸ ಮಾಡಿದರೂ 4-5 ಅರ್ಜಿ ಅಪ್ಲೋಡ್ ಆಗ್ತಾ ಇಲ್ಲ ಎಂದು ಗಣಕಯಂತ್ರ ನಿರ್ವಾಹಕ ಬಸವರಾಜ್, ಗಣಕಯಂತ್ರ ಯುಪಿಎಸ್ ಇಲ್ಲದೇ ಹಾಳಾಗುವ ಭಯ ಕಾಡ್ತಾ ಇದೆ ಎಂದರು.