ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಅಮಾವಾಸ್ಯೆ ಪೂಜೆ

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ  ಇಂದು ಅಮಾವಾಸ್ಯೆ ಪೂಜೆ

ದಾವಣಗೆರೆ ನಗರದ ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ದೀಪಾವಳಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.    

ಬೆಳಿಗ್ಗೆ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ, ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ  ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುವುದು ಎಂದು ದೇವಸ್ಥಾನ ಸಮಿತಿ ಗೌರವ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್ ತಿಳಿಸಿದ್ದಾರೆ.  

ಶ್ರೀಮತಿ ಭಾಗ್ಯಲಕ್ಷ್ಮಿ ಮತ್ತು ಮಂಜುನಾಥ್ ಗುಂಡಾಲ್ ಹಾಗೂ ಕುಟುಂಬದವರು ಸೇವಾಕರ್ತರಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ವಿವರಿಸಿದ್ದಾರೆ. ಬರುವ ಡಿಸೆಂಬರ್ 15 ರ ಭಾನುವಾರ ಹೊಸ್ತಿಲ ಹುಣ್ಣಿಮೆ ಹಾಗೂ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಜಯಂತ್ಯೋತ್ಸವ ಪ್ರಯುಕ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು,  ಶ್ರೀಮತಿ  ಲಕ್ಷ್ಮಮ್ಮ ಮತ್ತು ಸಹ ಕುಟುಂಬದವರು ಬಿ.ಹೆಚ್. ಗ್ರೂಪ್‌ನವರು  ಪ್ರಧಾನ ಸೇವಾಕರ್ತರಾಗಿದ್ದಾರೆ.  ಬರುವ 2025, ಫೆಬ್ರವರಿ 4 ರಂದು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 27ನೇ ವಾರ್ಷಿಕೋ ತ್ಸವ ನಡೆಸಲು ಸಂಕಲ್ಪ ಹೊಂದಿದ್ದು, ತತ್ಸಂಬಂಧ ಸುಹಾಸಿನಿಯರ ಹಸ್ತದಿಂದ ಇದೇ ದಿನಾಂಕ 16  ರಿಂದ ಪ್ರತಿ ಶನಿವಾರ ಸಂಜೆ 5ಕ್ಕೆ ದೇವಸ್ಥಾನದಲ್ಲಿ ಶ್ರೀ ವಿಷ್ಣುವಿಗೆ ಕ್ಷೀರಾಭಿಷೇಕ ನಂತರ ತುಳಸಿ ಅರ್ಚನೆ, ಹನುಮಾನ್ ಚಾಲೀಸ ಪಠಣ ಹಾಗೂ ಉಯ್ಯಾಲೋತ್ಸವವನ್ನು ನೆರವೇರಿಸಲಾಗುವುದು.

error: Content is protected !!