ಶ್ರಮಿಕರಿಗೆ ಉಡುಪು ವಿತರಿಸಿದ ಲಯನ್ಸ್‌

ಶ್ರಮಿಕರಿಗೆ ಉಡುಪು ವಿತರಿಸಿದ ಲಯನ್ಸ್‌

ದಾವಣಗೆರೆ, ಅ.31- ನಗರದ ಲಯನ್ಸ್ ಕ್ಲಬ್ ವತಿಯಿಂದ ಶ್ರೀ ಚನ್ನಬಸವೇಶ್ವರ ರೈಸ್ ಟೆಕ್ ಮಿಲ್‌ನಲ್ಲಿ ಶ್ರಮಿಕ ವರ್ಗದವರಿಗೆ ವಸ್ತ್ರ (ಉಡುಪು)ಗಳನ್ನು ವಿತರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಜಿ. ಉಳುವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಕ್ಲಬ್ ಅಧ್ಯಕ್ಷ ಎ. ಬಿ. ಚಂದ್ರಶೇಖರ್, ಎನ್. ವಿ. ಬಂಡಿವಾಡ ಆಗಮಿಸಿದ್ದರು.  

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಅವರು, ಶ್ರಮಿಕ ವರ್ಗ ಈ ದೇಶದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬು, ದುಡಿಯುವ ವರ್ಗ ಸದಾ ಸಂತೋಷ ಭರಿತರಾಗಿ ಇರಬೇಕು ಎಂದರು. 

ಲಯನ್ ಕಾರ್ಯದರ್ಶಿ ಸಿ.ಅಜಯ್ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಎಸ್. ನಾಗರಾಜ್, ಸಹ ಕಾರ್ಯದರ್ಶಿ
ಹೆಚ್.ಎಂ. ನಾಗರಾಜ್ ಸಮಾರಂಭದಲ್ಲಿ ಭಾಗವಹಿಸಿದ್ದರು.

error: Content is protected !!