ಸಾರ್ವಜನಿಕ ರುದ್ರಭೂಮಿಯ ಅವ್ಯವಸ್ಥೆ : ಅಗತ್ಯ ಕ್ರಮಕ್ಕೆ ಆಗ್ರಹ

ಸಾರ್ವಜನಿಕ ರುದ್ರಭೂಮಿಯ ಅವ್ಯವಸ್ಥೆ : ಅಗತ್ಯ ಕ್ರಮಕ್ಕೆ ಆಗ್ರಹ

 ದಾವಣಗೆರೆ, ಅ.30- ನಗರದ ಬೂದಾಳ್ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿ ಅವ್ಯವಸ್ಥೆಯಿಂದ ಕೂಡಿದ್ದು, ಮಹಾನಗರ ಪಾಲಿಕೆಯು ತತ್‌ಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ಆಗ್ರಹಿಸಿಸಿದ್ದಾರೆ.

ಈ ರುದ್ರಭೂಮಿಯು ಸ್ವಚ್ಛತೆ ಇಲ್ಲದೇ ದುರ್ವಾಸನೆಯಿಂದ ಕೂಡಿದೆ. ಮೂಲಭೂತ ಸೌಲಭ್ಯಗಳಿಲ್ಲ. ಪರಿಶುದ್ಧವಾದ ವಾತಾವರಣ ಇಲ್ಲ ಕಾರಣದಿಂದ ಶವ ಸಂಸ್ಕಾರಕ್ಕೆ ಬರುವ ಜನರಿಗೆ ಕಿರಿ-ಕಿರಿಯನ್ನುಂಟು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರುದ್ರಭೂಮಿಯ ಅವ್ಯವಸ್ಥೆಯ ಬಗ್ಗೆ ಅನೇಕ ಬಾರಿ ಪಾಲಿಕೆಗೆ ಮನವಿ ಪತ್ರ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಾಜ್ ಅವರು ಕಿಡಿಕಾರಿದ್ದಾರೆ.

ಮಾಜಿ ಶಾಸಕರಾಗಿದ್ದ ದಿ. ಕಾಂ.ಪಂಪಾಪತಿ ಮತ್ತು ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರುಗಳು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಈ ರುದ್ರ ಭೂಮಿ ಮಾದರಿಯಾಗಿತ್ತು.  ದುಃಖವನ್ನು ತುಂಬಿಕೊಂಡು ಬರುವ ಜನರು ಅಲ್ಲಿನ ಪರಿಸರವನ್ನು ಕಣ್ಮುಂಬಿಕೊಂಡು ಸಮಾಧಾನದಿಂದ ವಾಪಸ್ ಹೋಗುವಷ್ಟರ ಮಟ್ಟಿಗೆ ರುದ್ರಭೂಮಿಯಲ್ಲಿ ಗಿಡ – ಮರಗಳನ್ನು ಬೆಳೆಸಿ, ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಆದರೆ, ಇದೀಗ ಅಲ್ಲಿನ ವಾತಾವರಣವನ್ನು ನೋಡಿ ತಮ್ಮ ದುಃಖ ಮತ್ತಷ್ಟು ತುಂಬಿ ಬರುವಂತೆ ನಿರ್ಮಾಣವಾಗಿದೆ ಎಂದು ಅವರು ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಮಹಾಪೌರರು, ಆಯುಕ್ತರು, ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನ ಹರಿಸುವಂತೆ ನಾಗರಾಜ್ ಒತ್ತಾಯಿಸಿದ್ದಾರೆ.

error: Content is protected !!