ನಿಧಿ ಬೇತೂರ್, ಸಮರ್ಥ್ ಬೇತೂರ್‌ಗೆ ಚಿನ್ನದ ಪದಕ

ನಿಧಿ ಬೇತೂರ್, ಸಮರ್ಥ್ ಬೇತೂರ್‌ಗೆ ಚಿನ್ನದ ಪದಕ

ದಾವಣಗೆರೆ, ಅ. 27 – ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್ 2024 ಸ್ಪರ್ಧೆಯ 10-11 ವರ್ಷದ ಸಬ್ ಜ್ಯೂನಿಯರ್  ವಿಭಾಗದಲ್ಲಿ  ನಗರದ ನಿಧಿ ಬೇತೂರ್ ಹಾಗೂ 6 ವರ್ಷದ ವಿಭಾಗದಲ್ಲಿ ಸಮರ್ಥ್ ಬೇತೂರು ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ತಲಾ 2 ಚಿನ್ನದ ಪದಕ ಪಡೆದಿದ್ದಾರೆ. 

ಕೆ.ಪಿ. ಜೋಸ್ ಅವರಿಂದ ತರಬೇತಿ ಪಡೆದಿರುವ ನಗರದ ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ  ನಿಧಿ ಹಾಗೂ 1ನೇ ತರಗತಿ ವಿದ್ಯಾರ್ಥಿ ಸಮರ್ಥ್,  ಅಭಿಷೇಕ್ ಬೇತೂರು ಹಾಗೂ ಶ್ವೇತಾ ದಂಪತಿ ಮಕ್ಕಳು.

error: Content is protected !!