ದಾವಣಗೆರೆ, ಅ.27- ನಗರದಲ್ಲಿ ಕುಡಿಯುವ ನೀರಿಗಾಗಿ ಕಲ್ಪಿಸಿರುವ 24/7 ಜಲಸಿರಿ ಯೋಜನೆಯ ನೀರಿನ ಪೈಪ್‌ಲೈನ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಇತ್ತ ಕಡೆ ಗಮನ ವಹಿಸದೇ ನಿರ್ಲಕ್ಷಿಸಿರುವುದು ಜಲಸಿರಿ ಯೋಜನೆಯು ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ತಿಳಿಸಬೇಕಿದೆ ಎಂದು 33ನೇ ವಾರ್ಡ್‌ನ ಸರಸ್ವತಿ ನಗರ `ಸಿ’ ಬ್ಲಾಕ್ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಜಲಸಿರಿ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ನೀಡದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸ್ಥಳೀಯರಾದ ಎಲ್‌ಐಸಿ ರುದ್ರೇಶ್ ಅವರು ವಾರ್ಡ್‌ನ ಸದಸ್ಯರು, ಮಹಾಪೌರರು ಮತ್ತು ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಜಲಸಿರಿ ಯೋಜನೆ ಫಲಪ್ರದವಾಗುವಂತೆ ಮಾಡಬೇಕೆಂದು ಕೋರಿದ್ದಾರೆ.
January 2, 2025