ಬಂಜೆತನ ಶಾಪವೆಂದು ಗ್ರಹಿಸುವುದು ತಪ್ಪು : ಡಾ. ವರದಾ ಕಿರಣ್‌

ಬಂಜೆತನ ಶಾಪವೆಂದು ಗ್ರಹಿಸುವುದು ತಪ್ಪು : ಡಾ. ವರದಾ ಕಿರಣ್‌

ಮಲೇಬೆನ್ನೂರು, ಅ.27- ಬಂಜೆತನ ಶಾಪ ಎಂದು ಗ್ರಹಿಸುವುದು ತಪ್ಪು ಎಂದು ದಾವಣಗೆರೆಯ ಕಡ್ಲಿ ಐವಿಎಫ್‌ ಸೆಂಟರ್‌ನ ಡಾ. ವರದಾಕಿರಣ್‌ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಮಲೇಬೆನ್ನೂರು ಲಯನ್ಸ್‌ ಕ್ಲಬ್‌, ಶ್ರೀ ವೀರಭದ್ರೇಶ್ವರ ಚಾರಿಟೇಬಲ್‌ ಟ್ರಸ್ಟ್‌ ಮತ್ತು ದಾವಣಗೆರೆಯ ಕಡ್ಲಿ ಐವಿಎಫ್‌ ಸೆಂಟರ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಉಚಿತ ಬಂಜೆತನ ನಿವಾರಣಾ ಸಮಾಲೋಚನಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ 8 ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಬಂಜೆತನ ಸಮಸ್ಯೆ ಕಾಣುತ್ತದೆ.  ಸಾಮಾಜಿಕ ಸಮಸ್ಯೆಗೆ ಸಿಲುಕಿ ಹಲವಾರು ಕುಟುಂಬಗಳು ಮನೋವ್ಯಾಧಿ  ಅನುಭವಿಸುತ್ತಿವೆ. ವೈಜ್ಞಾನಿಕ ಯುಗದಲ್ಲೂ ಜನರು ನಕಲಿ ವೈದ್ಯರು, ಮಾಟ ಮಂತ್ರ – ತಂತ್ರ, ಹರಕೆ, ಪೂಜೆ ಮೊರೆ ಹೋಗುತ್ತಿದ್ದಾರೆ. ಆದರೆ, ಅತ್ಯಾಧುನಿಕ ಚಿಕಿತ್ಸೆ ಮೂಲಕ ಸಂತಾನ ಪಡೆಯಲು ಅವಕಾಶ ಇದೆ. 

ಸರ್ಕಾರದ ಯಶಸ್ವಿನಿ, ಇಎಸ್‌ಐ, ಆಯುಷ್ಮಾನ್‌ ವಿಮಾ ಯೋಜನೆಯಡಿ ಚಿಕಿತ್ಸೆ ಲಭ್ಯವಿದೆ. ಸಂತಾನ ಸಮಸ್ಯೆ ಇರುವವರು ಇದರ ಲಾಭ ಪಡೆಯಿರಿ ಎಂದು ಅವರು ಕೋರಿದರು.

ಲಯನ್ಸ್‌ ಕ್ಲಬ್‌ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್‌ ಮಾತನಾಡಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷರಾದ ಪಾರ್ವತಮ್ಮ ಇ.ಎಂ.ಮರುಳಸಿದ್ದೇಶ್, ಕಾರ್ಯದರ್ಶಿ ರೂಪಾ ಪಾಟೀಲ್, ಡಾ.ಹೆಚ್.ಜೆ.ಚಂದ್ರಕಾಂತ್‌, ಓ.ಜಿ. ರುದ್ರಗೌಡ, ಎನ್.ಜಿ.ಶಿವಾಜಿ ಪಾಟೀಲ್‌, ಎನ್.ಜಿ.ಬಸವನಗೌಡ್ರು,
ಟಿ.ಹೆಚ್‌.ಒ ಡಾ. ಅಬ್ದುಲ್‌ ಖಾದರ್‌,
ಡಾ. ಲಕ್ಷ್ಮಿದೇವಿ, ಅಕ್ಕನ ಬಳಗದ ಅಧ್ಯಕ್ಷೆ ಸರೋಜಮ್ಮ ಡಾ.ಎಂ.ಜಿ.ರಂಗನಾಥ್, ವೀರಭದ್ರೇಶ್ವರ ದೇವಸ್ಥಾನದ ಬಿ.ಎನ್.ವೀರೇಶ್ ಭಾಗವಹಿಸಿದ್ದರು.

error: Content is protected !!