ದಾವಣಗೆರೆ, ಅ.25- ಮುಂಬೈ ನಗರದಲ್ಲಿ ಅ.19ರಿಂದ 26ರ ವರೆಗೆ ನಡೆದ ಅಂತರರಾಷ್ಟ್ರೀಯ 2024ರ ಏಷಿಯನ್ ಆರ್ಮ್ ರೆಸ್ಲಿಂಗ್ ಕಪ್ ಕ್ರೀಡೆಯಲ್ಲಿ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಕೆ.ಎ. ಕನ್ನಾಳ್ ಕೆಂಚಪ್ಪ ದೇಶವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದಿದ್ದಾರೆ.
90 ಕೆ.ಜಿ ವಿಭಾಗದ ಪಂಜ ಕುಸ್ತಿಯಲ್ಲಿ ಭಾಗವಹಿಸಿದ ಅವರು, ಉತ್ತಮ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಪಟು ಕೆಂಚಪ್ಪ, ಪ್ರಸ್ತುತ ದಾವಣಗೆರೆ ವಿವಿಯ ಬಿ.ಪಿ.ಇಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿ ವ್ಯಾಸಂಘ ಮಾಡುತ್ತಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆ ಗೈಯ್ಯುವ ಗುರಿ ಹೊಂದಿದ್ದಾರೆ.