ಚಳ್ಳಕೆರೆ, ಅ.25- ತಾಲ್ಲೂಕಿನ ಸಮಸ್ತ ಮಾದಿಗ ಸಮಾಜದ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ ಕಾನೂನು ಬಾಹಿರ ಕೆಲಸದ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ ಮಾದಿಗ ಬಂಧುಗಳು ಪ್ರತಿಭಟಿಸಲೇ ಬೇಕಾದ ಅನಿವಾರ್ಯತೆ ಮತ್ತು ಹೋರಾಟ ಮಾಡಿ ನಮ್ಮ ಆಸ್ತಿ ಉಳಿಸಬೇಕಾಗಿದೆ ಎಂದು ಇಲ್ಲಿಯ ನಗರಸಭೆ ಮುಂಭಾಗದಲ್ಲಿ ಧರಣಿನಿರತ ನಗರಸಭೆ ಮಾಜಿ ಸದಸ್ಯ ಎಂ. ಶಿವಮೂರ್ತಿ ಹೇಳಿದರು.
ನಮ್ಮ ಪೂರ್ವಜರು ಸಮಾಜದ ಏಳಿಗೆಗಾಗಿ ಒದಗಿಸಿರುವ ಚಳ್ಳಕೆರೆ ನಗರದಲ್ಲಿ ಹೊಂದಿಕೊಂಡಿರುವ ಕುಲುಮೆ ರಸ್ತೆ ಮತ್ತು ಚರ್ಮ ಹದ ಮಾಡುವ ಕೈಗಾರಿಕೆ ಹಾಗೂ ಚರ್ಮ ಮಾರಾಟ ಮಾಡುವ ಮಳಿಗೆಯನ್ನು ಮತ್ತು ಚಿತ್ರದುರ್ಗ ರಸ್ತೆಯಲ್ಲಿರುವ ಜಗಜೀವನ್ ರಾಂ ಸಮುದಾಯ ಭವನ ಮತ್ತು ಪುರಸಭಾ ಕಲ್ಯಾಣ ಮಂಟಪ ಅನ್ಯ ಧರ್ಮೀಯರ ಪಾಲಾಗುವ ಪರಿಸ್ಥಿತಿ ಬಂದಿದೆ ಎಂದು ಅವರು ವ್ಯಾಕುಲತೆ ವ್ಯಕ್ತಪಡಿಸಿದರು.
ಜಲಮಂಡಳಿ ಅಧಿಕಾರಿ ಕೆ.ನಾಗರಾಜ್, ಬ್ಯಾಂಕಿನ ಅಧಿಕಾರಿ ಅಂಜನಪ್ಪ, ಬ್ಯಾಂಕ್ ಶಿವಮೂರ್ತಿ, ನಾಮ ನಿರ್ದೇಶಿತ ಸದಸ್ಯರಾದ ಇಂದ್ರೇಶ್, ವೀರಭದ್ರಪ್ಪ, ಎಸ್.ಸಿ.ಪಿ.ಇ.ಸಿ.ಎಲ್. ಶಾಂತಕುಮಾರ್, ಮೇತ್ರಿ ದೇಮಯ್ಯ, ಪಿ.ಹೆಚ್. ವೀರಣ್ಣ, ಪತ್ರಕರ್ತರಾದ ಸಿ. ವೈ. ಗಂಗಾಧರ್, ಚೌಡಪ್ಪ, ವಕೀಲರಾದ ಕಾಂತರಾಜ್, ಮಹೇಶ್ ಕೊರ್ತಿಕುಂಟಿ, ಪತ್ರಕರ್ತ ತಿಪ್ಪೇಸ್ವಾಮಿ, ಗಂಗಾಧರ್ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.