ಕುರ್ಕಿಯಲ್ಲಿ ಕನ್ನಡ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ

ಕುರ್ಕಿಯಲ್ಲಿ ಕನ್ನಡ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ

ದಾವಣಗೆರೆ, ಅ.25- ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಾ ದಾವಣಗೆರೆ ಮೂಲಕ ಕುರ್ಕಿ ಗ್ರಾಮಕ್ಕೆ ಬಂದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಜಿ. ನಾಗಮ್ಮ ಪುಷ್ಪ ಮಾಲೆ ಹಾಕುವುದರ ಮೂಲಕ ಸ್ವಾಗತಿಸಿದರು.

ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿಯೂ ಕುರ್ಕಿ ಗ್ರಾಮಕ್ಕೆ ಕನ್ನಡ ಜ್ಯೋತಿ ರಥ ಬಂದಿತ್ತು. ಈಗ ಮತ್ತೆ ನಮ್ಮ ಗ್ರಾಮದ ಮೂಲಕ ಹಾಯ್ದ ಹೋಗುತ್ತಿರುವುದು ನಮ್ಮ ಅದೃಷ್ಟ. ಹಾಗೆಯೇ ನಮ್ಮ ಗ್ರಾಮದವರಿಗೆ ಸಂತೋಷವನ್ನುಂಟು ಮಾಡಿದೆ ಎಂದು ಹಿರಿಯ ಸಾಹಿತಿ ಎಸ್. ಸಿದ್ದೇಶ್ ಕುರ್ಕಿ ಸ್ಮರಿಸಿದರು.

ಓದೋಗೌಡ್ರು ರೇವಣಸಿದ್ಧಪ್ಪ ಅವರು ರಥಯಾತ್ರೆಯ ರೂಪುರೇಷೆಗಳ ಬಗ್ಗೆ ಮಾತನಾಡಿದರು. ಜಗದೀಶ ಕೂಲಂಬಿ ಸಾಹಿತ್ಯ ಸಮ್ಮೇಳನ ನಡೆಯುವುದರ ಬಗ್ಗೆ ತಿಳಿಸಿದರು. 

ವಾದ್ಯ ಮೇಳದೊಂದಿಗೆ ಒಂದು ಕಿ.ಮೀ.ವರೆಗೂ ಮೆರವಣಿಗೆ ಮಾಡಿ ಬೀಳ್ಕೊಡಲಾಯಿತು. 

ಮೆರವಣಿಗೆಯಲ್ಲಿ ಎ.ಎಂ. ಸಿದ್ದೇಶ್, ನಂದ್ಯಪ್ಪ, ಕೆ.ಜಿ.ಬಸವರಾಜಪ್ಪ, ಹೆಚ್. ಜಿ. ಮಲ್ಲಿಕಾಜು೯ನ,  ಅಜ್ಜಯ್ಯ, ರವಿ, ಅಂಗಡಿ ಮಹೇಶ್, ನಾಗರಾಜ, ಕೆ.ವಿ.ಓಂಕಾರಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಮೀರಾ  ಮತ್ತು ಇತರರು ಭಾಗವಹಿಸಿದ್ದರು.

error: Content is protected !!