ಬೆಂಚ್‌ಪ್ರೆಸ್‌ : ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಬೆಂಚ್‌ಪ್ರೆಸ್‌ : ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ದಾವಣಗೆರೆ, ಅ.24- ಗೋವಾ ರಾಜ್ಯದ ವಾಸ್ಕೋಡಿಗಾಮದಲ್ಲಿ ಕಳೆದ ವಾರ ನಡೆದ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಬೆಂಚ್‌ಪ್ರೆಸ್ ಚಾಂಪಿಯನ್ ಸ್ಪರ್ಧೆಯ ಕ್ಲಾಸಿಕ್ ಬೆಂಚ್‌ಪ್ರೆಸ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.

ತಂಡದಲ್ಲಿ ಪ್ರಥಮ ಸ್ಥಾನವನ್ನು ರಾಜಸ್ತಾನ, ದ್ವಿತೀಯ ಸ್ಥಾನವನ್ನು ಕರ್ನಾಟಕ ಹಾಗೂ ತೃತೀಯ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿವೆ.

ಕರ್ನಾಟಕ ತಂಡದ ತೀರ್ಪುಗಾರರಾದ ನಗರದ ಎಂ. ಮಹೇಶ್ವರಯ್ಯ ಅವರು ಪವರ್‌ಲಿಫ್ಟಿಂಗ್‌ನಲ್ಲಿ ಜೀವಮಾನದ ಪ್ರಶಸ್ತಿ ವಿಜೇತರಾಗಿರುತ್ತಾರೆ. ಸ್ಟ್ರಾಂಗ್ ಮ್ಯಾನ್ ಆಫ್ ಏಷ್ಯಾ ಪ್ರಶಸ್ತಿ ವಿಜೇತರು ಹಾಗು ರಾಷ್ಟ್ರೀಯ ಕೆಟಗರಿ -1 ತೀರ್ಪುಗಾರರು ಎಂಬ ಹೆಗ್ಗಳಿ ಕೆಗೆ ಪಾತ್ರರಾದ ಮಹೇಶ್ವರಯ್ಯ ಅವರನ್ನು ಬೀರೇಶ್ವರ ವ್ಯಾಯಾಮ ಶಾಲೆಯ ಗ್ರೂಪ್ ಆಫ್ ಐರನ್ ಗೇಮ್ಸ್‌, ನಗರಸಭೆ ವ್ಯಾಯಾಮ ಶಾಲೆಯ ಎಲ್ಲಾ ಹಿರಿಯ, ಕಿರಿಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

error: Content is protected !!