ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತ

ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತ

ಹಾರಕನಾಳು ಗ್ರಾಮದಲ್ಲಿನ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ವರಸದ್ಯೋಜಾತ ಸ್ವಾಮೀಜಿ

ಹರಪನಹಳ್ಳಿ,ಅ. 23-   ಮಹರ್ಷಿ ವಾಲ್ಮೀಕಿ ಯವರ ಕೊಡುಗೆಗಳು  ಧಾರ್ಮಿಕ ಕ್ಷೇತ್ರವನ್ನು ಮೀರಿ, ಭಾರತದ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಆಳವಾಗಿ ಪ್ರಭಾವಿಸುತ್ತವೆ.  ಭಾರತಕ್ಕೆ ಸಂಸ್ಕೃತಿ ಕೊಟ್ಟ ಏಕಮೇವ ಕವಿ ವಾಲ್ಮೀಕಿ ಆಗಿದ್ದಾರೆ. ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತವಾಗಿರುತ್ತದೆ ಎಂದು ತೆಗ್ಗಿನ‌ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಾರಕನಾಳು ಗ್ರಾಮದ ಕಲಾಮಂದಿರದಲ್ಲಿ  ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಈ ದೇಶಕ್ಕೆ, ನಾಡಿಗೆ ಬಹುಮುಖ್ಯವಾದ ಕೊಡುಗೆಯನ್ನು ನೀಡಿದ್ದಾರೆ. ರಾಮಾಯಣವು ಮನುಷ್ಯನನ್ನು ಬದಲಾವಣೆ ಮಾಡುವ ಬಹುಮುಖ್ಯ ಗ್ರಂಥವಾಗಿದೆ. ಆದರೆ, ಇಂದಿನ ಸಮಾಜಕ್ಕೆ ವರ್ತಮಾನ ಚರಿತ್ರೆ ಬೇಕಾಗಿದೆ. ವಿನಹ ಭೂತಕಾಲದ ಚರಿತ್ರೆ ಅಲ್ಲ.  ಹಾಗಾಗಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು ಅವರ ಆದರ್ಶ ಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಹಿರೇಹಡಗಲಿಯ ಮಾನಿಹಳ್ಳಿ ಪುರವರ್ಗ ಮಠದ  ಶ್ರೀ   ಮಳೆಯೋಗೀಶ್ವರ  ಸ್ವಾಮೀಜಿ   ಮಾತನಾಡಿ, ಜಗತ್ತಿನಲ್ಲಿ ಒಳ್ಳೆಯವರು, ಕೆಟ್ಟವರು ಹುಟ್ಟಿ ಹೋಗಿದ್ದಾರೆ. ಸೂರ್ಯ, ಚಂದ್ರ ಇರುವವರೆಗೆ ನೆನಪಿನಲ್ಲಿ ಉಳಿಯುವಂತಹ ಶಾಶ್ವತವಾದ ಕೆಲಸ ಮಾಡಿ ಹೋಗಿದ್ದಾರೆ. ಮಹರ್ಷಿ ವಾಲ್ಮೀಕಿ ಅಂತವರು ಕೋಟಿಗೆ ಒಬ್ಬರು ಸಿಗುತ್ತಾರೆ. ಅವರ ಹೆಸರಿನಲ್ಲಿ  ಜಾತಿ ಹೆಸರು ಹೇಳಿಕೊಂಡು ಬೆಳೆಯುವುದು ಸಾಧನೆಯಲ್ಲ. ಸಮಾಜಕ್ಕೆ ಉಪಕಾರ ಮಾಡುವವರೇ ನಿಜವಾದ ಸಾಧಕರು. ಹಣ, ಅಂತಸ್ತು ಮುಖ್ಯವಲ್ಲ. ಸಮಾಜವನ್ನು ಬೆಳೆಸುವ ಕಾರ್ಯ ಸಮಾಜದ ಮುಖಂಡರಿಂದ ಆಗಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಸರ್ವರಿಗೂ ಸಮಪಾಲು, ಸಮಬಾಳು ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪ್ರಾಧ್ಯಾಪಕ   ಡಾ. ಹರಾಳು ಬುಳ್ಳಪ್ಪ  ಹಾಗೂ ಪ್ರಾಂಶುಪಾಲ  ದುರುಗೇಶ ಮಾತನಾಡಿ,  ವಾಲ್ಮೀಕಿ ಯವರನ್ನು ಜಾತಿಯಿಂದ ಗುರುತಿಸುವುದು ಸರಿಯಲ್ಲ. ಆಚರಣೆಗಳು ಅರ್ಥಪೂರ್ಣವಾಗಿರ ಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಇತರೆ ಸಮಾಜಗಳ ಮುಖಂಡರನ್ನು  ಕರೆಯಿಸಿ  ಅರ್ಥ ಪೂರ್ಣ ಕಾರ್ಯಕ್ರಮ ಜರುಗಿಸಿದ್ದು ಉತ್ತಮ ಸಂದೇಶವಾಗಿದೆ ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಅಧ್ಯಕ್ಷರಾದ ಎಚ್.ಟಿ.ವನಜಾಕ್ಷಮ್ಮ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಕಾರ್ಯದರ್ಶಿ ಜಿಟ್ಟಿನಕಟ್ಟಿ ಎಚ್.ಕೆ. ಮಂಜುನಾಥ, ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್, ಮುಖಂಡರಾದ ಪ್ರಕಾಶಗೌಡ, ಎಚ್.ಟಿ.ಶಿವಯೋಗಿ, ರಾಜಶೇಖರ್, ಬಿ.ಪಕ್ಕೀರಪ್ಪ, ಕೆ.ಅಶೋಕ, ಚಿಕ್ಕೇರಿ ಬಸಪ್ಪ, ಡಿ.ಪರಸಪ್ಪ, ಕೃಷ್ಣ ನಾಯ್ಕ, ವೀರನಾಯ್ಕ, ಶಶಿನಾಯ್ಕ, ಬಿ.ದುರು ಗಯ್ಯ, ಎಲ್.ಬಿ.ಹಾಲೇಶನಾಯ್ಕ, ಮಂಜುನಾಥ ಈಶಾಪುರ, ಚೂರಿ ಬಸವರಾಜ, ವಿ.ಬಿ.ಮಂಜುನಾಥ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!