ಹರಿಹರದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್
ಹರಿಹರ, ಅ. 23 – ಚೆನ್ನಮ್ಮನನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ, ಅವರ ಆಡಳಿತಾವಧಿಯಲ್ಲಿ ಸಮಾಜದ ನಿರ್ಮಾಣಕ್ಕೆ ಶ್ರಮಿಸಿರುವ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಉಲ್ಲೇಖವಾಗಿವೆ ಎಂದು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಹಾಗೂ 200ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಚೆನ್ನಮ್ಮನ ಇತಿಹಾಸ ತಿಳಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಯುವ ಪಿಳಿಗೆಗೆ ರಾಣಿ ಚೆನ್ನಮ್ಮ ಜೀವನ ಚರಿತ್ರೆಯನ್ನು ತಿಳಿಸುವಂತಹ ಕಾರ್ಯಕ್ಕೆ ಮುಂದಾಗ ಬೇಕಿದೆ ಎಂದರು.
ಬಿಜೆಪಿ ಮುಖಂಡ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ ಇತಿಹಾಸ ಮರೆತರೆ ಭವಿಷ್ಯದಲ್ಲಿ ಇತಿಹಾಸ ಸೃಷ್ಠಿಸಲು ಸಾದ್ಯವಿಲ್ಲ, ನಾಡಿನ ಅಭಿವೃದ್ದಿಗೆ ಶ್ರಮಿಸಿದ ವೀರ ಮಹಿಳೆಯ ಜೀವನ ಚರಿತ್ರೆ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕೆಂದರು.
ಹೊಳೆಸಿರಿಗೆರೆಯ ಎನ್.ಜಿ. ನಾಗನಗೌಡ್ರು ಮಾತ ನಾಡಿ ವೀರಶೈವರೆಲ್ಲರೂ ಒಳ ಪಂಗಡಗಳನ್ನು ಮರೆತು ಸಾಮರಸ್ಯ ಬೆಳೆಸುವ ಮೂಲಕ ಸದೃಡ ಸಮಾಜದ ನಿರ್ಮಾಣ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ತಾ.ಪಂ. ಮಾಜಿ ಸದಸ್ಯ ಮಹಾಂತೇಶ್ ಮಾತನಾಡಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಸ್ಮರಣೆ ಕೇವಲ ಜಯಂತಿಗಳಿಗೆ ಸೀಮಿತವಾಗದೆ ಹರಿಹರ ಪ್ರಮೂಖ ರಸ್ತೆಯಲ್ಲಿ ಆವರ ಪುತ್ಥಳಿಯನ್ನು ಸ್ಥಾಪಿಸಿ ಪ್ರತಿನಿತ್ಯ ಆವರ ಸ್ಮರಣೆ ಮಾಡುವ ರೀತಿ ತಾಲೂಕು ಆಡಳಿತ ವ್ಯವಸ್ಥೆ ಮಾಡಲು ಮುಂದಾಗಬೇಕು ಎಂದರು.
ಈ ವೇಳೆ ಸರ್ವೋಧಯ ಮಠದ ಶಿವಕುಮಾರ್ ಶ್ರೀ, ನಗರ ಸಭಾ ಸದಸ್ಯೆ ಆಶ್ವಿನಿ ಕೃಷ್ಣ, ಆಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಕಾರ್ಯದರ್ಶಿ ವೀರೇಶ್ ಯಾದವಾಡ್, ಮುಖಂಡರಾದ ಗುಡದದಳ್ಳಿ ಶೇಖರಪ್ಪ, ಬೆಣ್ಣೆ ಸಿದ್ದಣ್ಣ, ಜಿ.ಕೆ. ಮಲ್ಲಿಕಾರ್ಜುನ, ತಿಮ್ಮನ ಗೌಡ್ರು, ನಿರಂಜನ ದೀಟೂರ್, ಗಜೇಂದ್ರ, ಮಾಲತೇಶ್, ಕೆ. ಕರಿಬಸಪ್ಪ, ಪ್ರವೀಣ್ ಕುಮಾರ್, ಸಾಲಕಟ್ಟಿ ಮಂಜಣ್ಣ, ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.